Sunday, August 31, 2025

ರಷ್ಯಾ-ಉಕ್ರೇನ್ ಯುದ್ಧವನ್ನು ಮೋದಿಯ ಯುದ್ಧ ಎಂದು ಕರೆದ ಟ್ರಂಪ್ ಸಲಹೆಗಾರ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತದ ಮೇಲೆ ಶೇ.50 ರಷ್ಟು ಭಾರಿ ಸುಂಕವನ್ನು ವಿಧಿಸಿದ ಕೆಲವೇ ಗಂಟೆಗಳಲ್ಲಿ, ಅವರ ವ್ಯಾಪಾರ ಸಲಹೆಗಾರ ಪೀಟರ್ ನವರೊ ರಷ್ಯಾ-ಉಕ್ರೇನ್ ಯುದ್ಧವನ್ನು ಮೋದಿಯ ಯುದ್ಧ ಎಂದು ಕರೆದಿದ್ದಾರೆ.

ಭಾರತವು ರಷ್ಯಾದಿಂದ ಅಗ್ಗದ ತೈಲವನ್ನು ಖರೀದಿಸುತ್ತಿರುವುದು ಮಾಸ್ಕೋದ ಮಿಲಿಟರಿ ಆಕ್ರಮಣಕ್ಕೆ ಉತ್ತೇಜನ ನೀಡುತ್ತಿದೆ ಎಂದು ನವರೊ ಹೇಳಿಕೊಂಡಿದ್ದಾರೆ.

ಭಾರತವು ರಷ್ಯಾದಿಂದ ತೈಲ ಖರೀದಿಸುವುದನ್ನು ನಿಲ್ಲಿಸಿದರೆ, ಅಮೆರಿಕವು ಭಾರತದ ಮೇಲೆ ವಿಧಿಸಿರುವ ಸುಂಕವನ್ನು ಶೇಕಡಾ 25 ರಷ್ಟು ಕಡಿಮೆ ಮಾಡಬಹುದು ಎಂದು ಹೇಳುವ ಮೂಲಕ ಅವರು ಭಾರತದ ಮೇಲೆ ಒತ್ತಡ ಹಾಕಿದ್ದಾರೆ.

ಇದು ಮೋದಿಯ ಯುದ್ಧ ಏಕೆಂದರೆ ಶಾಂತಿಯ ಹಾದಿ ಭಾರತದ ಮೂಲಕ ಹಾದು ಹೋಗುತ್ತದೆ ಎಂದು ನವರೊ ಬ್ಲೂಮ್‌ಬರ್ಗ್ ಟೆಲಿವಿಷನ್‌ಗೆ ನೀಡಿದ ಸಂದರ್ಶನದಲ್ಲಿ ಹೇಳಿದರು. ಭಾರತವು ರಷ್ಯಾದಿಂದ ತೈಲ ಖರೀದಿಸುವುದನ್ನು ಉಲ್ಲೇಖಿಸುತ್ತಿದ್ದರು, ಅದಕ್ಕೆ ಪ್ರತಿಯಾಗಿ ಮಾಸ್ಕೋ ತನ್ನ ಯುದ್ಧಕ್ಕಾಗಿ ಖರ್ಚು ಮಾಡುವ ಹಣವನ್ನು ಪಡೆಯುತ್ತದೆ ಎಂದಿದ್ದಾರೆ.



ಇದನ್ನೂ ಓದಿ