ಹೊಸದಿಗಂತ ಡಿಜಿಟಲ್ ಡೆಸ್ಕ್:
ಆಹಾರ ಖಾತೆ ಸಚಿವ ಉಮೇಶ್ ಕತ್ತಿ ಮಂಗಳವಾರ ರಾತ್ರಿ ನಿಧನರಾಗುವ ಮೂಲಕ ಸಜ್ಜನ ರಾಜಕಾರಣಿಯೋರ್ವರ ನಿರ್ಗಮನವಾಗಿದೆ.
ಉತ್ತರ ಕರ್ನಾಟಕ ಭಾಗದಲ್ಲಿ ತಮ್ಮದೇ ಪ್ರಭಾವ ಹೊಂದಿದ್ದ ಕತ್ತಿ, ಬರೋಬ್ಬರಿ ಒಂಭತ್ತು ಬಾರಿ ಚುನಾವಣೆ ಎದುರಿಸಿದ್ದರಲ್ಲದೆ, ಎಂಟು ಬಾರಿ ಶಾಸಕರಾಗಿದ್ದರು. ನಾಲ್ಕು ಬಾರಿ ಸಚಿವರಾಗಿಯೂ ಅವರು ರಾಜಕಾರಣದಲ್ಲಿ ತಮ್ಮ ಛಾಪು ಮೂಡಿಸಿದ್ದರು.
ಹಠವಾದಿಯಾಗಿದ್ದ ಉಮೇಶ್ ಕತ್ತಿ, ತಾನು ಅಂದುಕೊಂಡದ್ದನ್ನು ಸಾಧಿಸಲೇಬೇಕೆಂಬ ಛಲವುಳ್ಳ ರಾಜಕಾರಣಿ. ಸ್ವಾಭಿಮಾನಕ್ಕೆ, ಬೇಡಿಕೆಗೆ ಮನ್ನಣೆ ಸಿಗದಾಗಲೆಲ್ಲ ಅವರು ಬಹಿರಂಗವಾಗಿಯೇ ತಮ್ಮ ಸಿಟ್ಟನ್ನು ತೋರ್ಪಡಿಸುತ್ತಿದ್ದುದು ಅವರ ವಿಶೇಷತೆಯಾಗಿತ್ತು.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ