ಹೊಸದಿಗಂತ ಡಿಜಿಟಲ್ ಡೆಸ್ಕ್:
ಚಳಿ ತಡೆಯಲಾಗುತ್ತಿಲ್ಲ ಎಂದು ರೈಲಿನಲ್ಲಿಯೇ ಬೆಂಕಿ ಉರಿಸಿ ಚಳಿ ಕಾಯಿಸುತ್ತಿದ್ದ ಇಬ್ಬರು ಕಿಡಿಗೇಡಿಗಲಿಗೆ ರೈಲ್ವೆ ಪೊಲೀಸರು ’ಬಿಸಿ’ ಮುಟ್ಟಿಸಿದ ಘಟನೆ ದಿಲ್ಲಿಗೆ ತೆರಳುತ್ತಿದ್ದ ಸಂಪರ್ಕ ಕ್ರಾಂತಿ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ರೈಲಿನಲ್ಲಿ ನಡೆದಿದೆ.
ಬರ್ಹಾನ್ ರೈಲ್ವೆ ನಿಲ್ದಾಣದ ಬಳಿ ರೈಲ್ವೆ ಕ್ರಾಸಿಂಗ್‌ನಲ್ಲಿ ಕರ್ತವ್ಯದಲ್ಲಿದ್ದ ಗೇಟ್‌ಮ್ಯಾನ್ ಚಲಿಸುತ್ತಿದ್ದ ರೈಲಿನಲ್ಲಿ ಹೊಗೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅಧಿಕಾರಿಗಳಿಗೆ ತುರ್ತು ಮಾಹಿತಿ ನೀಡಿದ್ದರು. ಅಲರ್ಟ್ ಆದ ಆರ್‌ಪಿಎಫ್ ತಂಡ ರೈಲನ್ನು ಮುಂದಿನ ನಿಲ್ದಾಣ ಚಾಮ್ರೌಲಾದಲ್ಲಿ ನಿಲ್ಲಿಸುವ ವ್ಯವಸ್ಥೆ ಮಾಡಿದ್ದು, ಬೋಗಿ ಪರಿಶೀಲನೆ ವೇಳೆ ಸಗಣಿ ಬೆರಣಿ ಬಳಸಿ ಜನರಲ್ ಕೋಚ್‌ನಲ್ಲಿ ಇಬ್ಬರು ಬೆಂಕಿ ಉರಿಸಿ ಚಳಿ ಕಾಯಿಸಿಕೊಳ್ಳುತ್ತಿದ್ದುದು ಗಮನಕ್ಕೆ ಬಂದಿದೆ. ತಕ್ಷಣ ಬೆಂಕಿ ನಂದಿಸಿ ಇಬ್ಬರನ್ನು ವಶಕ್ಕೆ ಪಡೆಯಲಾಗಿದೆ. ಪೊಲೀಸ್ ವಶದಲ್ಲಿರುವವರನ್ನು ಫರಿದಾಬಾದ್‌ನ ಚಂದನ್ (೨೩) ಹಾಗೂ ಮತ್ತು ದೇವೇಂದ್ರ (೨೫) ಎಂದು ಗುರುತಿಸಲಾಗಿದೆ.