ರೋಹಿತ್ ಅಮೋಘ ಬ್ಯಾಟಿಂಗ್: ಪಂದ್ಯ ಗೆದ್ದು ಸಂಭ್ರಮಿಸಿದ ಟೀಮ್ ಇಂಡಿಯಾ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮಹಾರಾಷ್ಟ್ರದ ನಾಗ್ಪುರದಲ್ಲಿ ನಡೆಯುತ್ತಿರುವ ಟಿ20 ಸರಣಿಯ ಎರಡನೇ ಪಂದ್ಯದಲ್ಲಿ ಟೀಮ್ ಇಂಡಿಯಾ 6 ವಿಕೆಟ್ ಗಳ ಗೆಲುವು ಸಾಧಿಸಿದೆ.
ಮೊದಲು ಬ್ಯಾಟ್​ ಮಾಡಿ ಆಸ್ಟ್ರೇಲಿಯಾ ನಿಗದಿ 8 ಓವರ್​ಗಳಲ್ಲಿ 5 ವಿಕೆಟ್​ ನಷ್ಟಕ್ಕೆ 90 ರನ್​ಗಳನ್ನು ಕಲೆ ಹಾಕಿ ಟೀಂ ಇಂಡಿಯಾ ಗೆಲುವಿಗೆ 91 ರನ್​ಗಳ ಟಾರ್ಗೆಟ್​ ನೀಡಿತ್ತು. ಈ ರನ್ ಬೆನ್ನಟ್ಟಿದ ಟೀಮ್ ಇಂಡಿಯಾಕ್ಕೆ ಉತ್ತಮ ಆರಂಭ ಸಿಕ್ಕಿತು. ನಾಯಕ ರೋಹಿತ್, ರಾಹುಲ್ ಜೋಡಿ ಅಮೋಘ ಬ್ಯಾಟಿಂಗ್ ನಡೆಸಿದರು. ಈ ವೇಳೆ ದೊಡ್ಡ ಹೊಡೆತಕ್ಕೆ ಯತ್ನಿಸಿದ ರಾಹುಲ್ 10 ರನ್ ಗಳಿಸಿ ಔಟಾದರು. ಬಳಿಕ ಬ್ಯಾಟಿಂಗ್ ಗೆ ಬಂದ ಕೊಹ್ಲಿ ತಂಡದ ಮೊತ್ತವನ್ನು ಹೆಚ್ಚಿಸಿದರೂ,ಆಡಮ್ ಝಂಪಾಗೆ ವಿಕೆಟ್ ಒಪ್ಪಿಸಿದರು. ಸೂರ್ಯ ಕುಮಾರ್ ಯಾದವ್ ಬಂದ ಹಾದಿಯಲ್ಲಿ ನಿರ್ಗಮಿಸಿದರು.
ಯಾದವ್ ಬಳಿಕ ಬಂದ ಪಾಂಡ್ಯ ನಾಯಕ ರೋಹಿತ್ ಗೆ ಸಾಥ್ ನೀಡಿದರು. ಅಂತಿಮವಾಗಿ ಬ್ಯಾಟಿಂಗ್ ಬಂದ ಕಾರ್ತಿಕ್ ನಾಯಕನ ಜೊತೆ ಸೇರಿ ತoಡವನ್ನು ಗೆಲುವಿನ ದಡ ಸೇರಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!