ವಿಷಯ ದೊಡ್ಡದಾಗ್ಲಿ, ಚಿಕ್ಕದಾಗ್ಲಿ ನ್ಯಾಯ ನ್ಯಾಯವೇ! ಎಲ್ಲರಿಗೂ ಎರಡು ಲಡ್ಡು, ನಂಗ್ಯಾಕೆ ಒಂದೇ?? ಸಿಎಂಗೆ ಕಂಪ್ಲೆಂಟ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ಎಲ್ಲರಿಗೂ ಎರಡು ಲಡ್ಡು ನೀಡಿದ್ದಾರೆ, ನನಗೆ ಮಾತ್ರ ಒಂದೇ ಲಡ್ಡು ಕೊಟ್ಟಿದ್ದಾರೆ ಮಧ್ಯಪ್ರದೇಶದ ಭಿಂಡ್ ಜಿಲ್ಲೆಯ ಗ್ರಾಮಸ್ಥರೊಬ್ಬರು ಮುಖ್ಯಮಂತ್ರಿಗಳ ಸಹಾಯವಾಣಿಗೆ ಕರೆ ಮಾಡಿ ವಿಚಿತ್ರ ದೂರು ಸಲ್ಲಿಸಿದ್ದಾರೆ.

ಸ್ವಾತಂತ್ರ್ಯ ದಿನಾಚರಣೆ. ಗ್ರಾಮ ಪಂಚಾಯತ್ ಭವನದಲ್ಲಿ ಅದ್ಧೂರಿಯಾಗಿ ಆಚರಿಸಲಾಗಿತ್ತು. ಧ್ವಜಾರೋಹಣದ ಬಳಿಕ ಹಾಜರಿದ್ದ ಎಲ್ಲರಿಗೂ ಲಡ್ಡುಗಳನ್ನು ವಿತರಿಸಲಾಗಿತ್ತು. ಗ್ರಾಮಸ್ಥ ಕಮಲೇಶ್ ಕುಶ್ವಾಹ ಸರದಿ ಬಂದಾಗ ಅವರಿಗೆ ಕೇವಲ ಒಂದು ಲಾಡನ್ನು ನೀಡಲಾಗಿತ್ತು. ಅಲ್ಲಿಯೇ ಎಲ್ಲರಿಗೂ ಎರಡು ಕೊಟ್ಟಿದ್ದೀರಿ ನನಗೇಕೆ ಒಂದೇ ಲಡ್ಡು ಎಂದು ಪ್ರಶ್ನಿಸಿದ್ದಾರೆ.

ಆದರೆ ಅಲ್ಲಿರುವವರು ಕೊಡಲು ನಿರಾಕರಿಸಿದ್ದರು. ಅವರು ಪಂಚಾಯತ್ ಕಟ್ಟಡದ ಹೊರಗಿನಿಂದಲೇ ಸಿಎಂ ಸಹಾಯವಾಣಿಗೆ ಕರೆ ಮಾಡಿ ವಿಚಾರ ತಿಳಿಸಿದ್ದರು.

ಧ್ವಜಾರೋಹಣ ಮಾಡಿದ ನಂತರ ಪಂಚಾಯತ್ ಸರಿಯಾಗಿ ಸಿಹಿತಿಂಡಿಗಳನ್ನು ವಿತರಿಸಲು ವಿಫಲವಾಗಿದೆ ಮತ್ತು ಈ ವಿಷಯವನ್ನು ಬಗೆಹರಿಸಬೇಕಾಗಿದೆ ಎಂದು ಖುಷ್ವಾಹ ತಮ್ಮ ದೂರಿನಲ್ಲಿ ತಿಳಿಸಿದ್ದಾರೆ.

ಗ್ರಾಮಸ್ಥರು ಹೊರಗೆ ರಸ್ತೆಯಲ್ಲಿ ನಿಂತಿದ್ದರು. ಪ್ಯೂನ್ ಅವರಿಗೆ ಒಂದು ಲಾಡು ಕೊಟ್ಟಿದ್ದಾರೆ , ಆದರೆ ಅವರು ಎರಡು ಲಾಡು ಕೊಡಲು ಒತ್ತಾಯಿಸಿದರು. ನಿರಾಕರಿಸಿದಾಗ, ಅವರು ಸಿಎಂ ಸಹಾಯವಾಣಿಗೆ ಕರೆ ಮಾಡಿದ್ದಾರೆ ಎಂದು ಪಂಚಾಯತ್ ಕಾರ್ಯದರ್ಶಿ ರವೀಂದ್ರ ಶ್ರೀವಾಸ್ತವ ತಿಳಿಸಿದ್ದಾರೆ. ಪಂಚಾಯತ್ ಆತನಿಗಾಗಿ ಮಾರುಕಟ್ಟೆಯಿಂದ ಒಂದು ಕೆಜಿ ಸಿಹಿ ತಿನಿಸು ಖರೀದಿಸಿ ದೂರುದಾರನನ್ನು ಸಮಾಧಾನ ಪಡಿಸಲು ಪ್ರಯತ್ನಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!