ಹೊಸದಿಗಂತ ಡಿಜಿಟಲ್ ಡೆಸ್ಕ್:
ಶಬರಿಮಲೆ ಯಾತ್ರೆಯನ್ನು ಗಮನದಲ್ಲಿಟ್ಟುಕೊಂಡು ಭಾರತೀಯ ರೈಲ್ವೆ ಇಲಾಖೆ ಮಹತ್ವದ ಬದಲಾವಣೆಯನ್ನು ಮಾಡಿಕೊಂಡಿದ್ದು, ಶಬರಿಮಲೆ ಸಮೀಪದ ಚೆಂಗನ್ನೂರಿನಲ್ಲಿ ಕಾಸರಗೋಡು-ತಿರುವನಂತಪುರಂ ವಂದೇ ಭಾರತ್ ರೈಲನ್ನು ನಿಲ್ಲಿಸಲು ಒಪ್ಪಿಗೆ ನೀಡಿದೆ.
ಈ ಸಂಬಂಧ ರೈಲ್ವೆ ಇಲಾಖೆಯಿಂದ ದಕ್ಷಿಣ ರೈಲ್ವೇಗೆ ಅಧಿಸೂಚನೆ ಕಳುಹಿಸಲಾಗಿದೆ.
ಅಧಿಸೂಚನೆಯ ಪ್ರಕಾರ, ಚೆಂಗನ್ನೂರಿನಲ್ಲಿ ನಿಲ್ದಾಣದಲ್ಲಿ ಪರಿಶೀಲನೆ ಮಾಡಲಾಗುತ್ತದೆ. ಟಿಕೆಟ್‌ಗಳ ಮಾರಾಟದ ಮೇಲೆ ತೀವ್ರ ನಿಗಾ ಇರಿಸಲಾಗುತ್ತದೆ.
ಈ ಕುರಿತು ಸೆಪ್ಟೆಂಬರ್‌ನಲ್ಲಿ ಮುರಳೀಧರನ್ ಅವರು ಕೇಂದ್ರ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಅವರಿಗೆ ಚೆಂಗನ್ನೂರು ರೈಲು ನಿಲ್ದಾಣದಲ್ಲಿ ನಿಲುಗಡೆಗೆ ಅವಕಾಶ ನೀಡುವಂತೆ ಮನವಿ ಮಾಡಿದ್ದರು.
‘ಚೆಂಗನ್ನೂರ್ ರೈಲು ನಿಲ್ದಾಣವು ಪ್ರಾಥಮಿಕವಾಗಿ ನಾಲ್ಕು ಜಿಲ್ಲೆಗಳಿಗೆ ಅವಕಾಶ ಕಲ್ಪಿಸುತ್ತದೆ. ಅಲಪ್ಪುಳ, ಕೊಲ್ಲಂ, ಪತ್ತನಂತಿಟ್ಟ ಮತ್ತು ಕೊಟ್ಟಾಯಂಗೆ ಇದು ಸೇವೆ ಸಲ್ಲಿಸುತ್ತದೆ. 2009 ರಲ್ಲಿ ಚೆಂಗನ್ನೂರ್ ರೈಲು ನಿಲ್ದಾಣವನ್ನು ‘ಗೇಟ್‌ವೇ ಆಫ್ ಶಬರಿಮಲೆ’ ಎಂದು ಭಾರತೀಯ ರೈಲ್ವೆ ಘೋಷಿಸಿದೆ.
.
ಈ ಕುರಿತು ಟ್ವೀಟ್ ಮಾಡಿರುವ ಮುರಳೀಧರನ್ ಅವರು, ‘ಅಯ್ಯಪ್ಪ ದೇವರ ಭಕ್ತರಿಗೆ ಒಳ್ಳೆಯ ಸುದ್ದಿ. ವಿನಂತಿಯನ್ನು ಪರಿಗಣಿಸಿ ಕಾಸರಗೋಡಿಗೆ ಅನುಕೂಲ ಕಲ್ಪಿಸಿದ್ದಕ್ಕಾಗಿ ಗೌರವಾನ್ವಿತ ಕೇಂದ್ರ ರೈಲ್ವೆ ಸಚಿವ ಅಶ್ವೀನಿ ವೈಷ್ಣವ್ ಅವರಿಗೆ ಧನ್ಯವಾದಗಳು. ಶಬರಿಮಲೆಯ ಹೆಬ್ಬಾಗಿಲು ಎಂದು ಕರೆಯಲ್ಪಡುವ ಚೆಂಗನ್ನೂರಿನಲ್ಲಿ ವಂದೇ ಭಾರತ್ ರೈಲು ನಿಲುಗಡೆಯಾಗಲಿದೆ’ ಬರೆದುಕೊಂಡಿದ್ದಾರೆ.