ಸಿಎಂ ಬೊಮ್ಮಾಯಿಗೆ ನಟ ಸುದೀಪ್ ಬೆಂಬಲ: ಕಾಂಗ್ರೆಸ್ ನಿಂದ ಟ್ವೀಟ್ ವಾರ್ ಶುರು!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕರ್ನಾಟಕ ವಿಧಾನಸಭೆಗೆ ಚುನಾವಣಾ(Karnataka Assembly Election 2023) ಅಖಾಡದಲ್ಲಿ ರಾಜಕೀಯ ಲೆಕ್ಕಾಚಾರ ಶುರುವಾಗಿದ್ದು, ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯಲ್ಲಿ ಬ್ಯುಸಿಯಾಗಿವೆ.

ಈ ಮಧ್ಯೆ ಬಿಜೆಪಿಯಲ್ಲಿ (BJP) ಮಹತ್ತರವಾದ ಬೆಳವಣಿಗೆ ನಡೆದಿದೆ. ನಟ ಕಿಚ್ಚ ಸುದೀಪ್ (Kichcha Sudeep)​, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿವರೊಂದಿಗೆ (CM Basavaraj Bommai) ಜಂಟಿ ಸುದ್ದಿಗೋಷ್ಠಿ ನಡೆಸಿ, ನನ್ನ ಬೆಂಬಲ ಸಿಎಂ ಬೊಮ್ಮಾಯಿಯವರಿಗೆ ಎಂದಿದ್ದಾರೆ.
ಇದೀಗ ಇದುರಾಜ್ಯ ರಾಜಕಾರಣದಲ್ಲಿ ಸಾಕಷ್ಟು ಚರ್ಚೆಯನ್ನು ಹುಟ್ಟುಹಾಕಿದೆ. ರಾಜ್ಯ ಕಾಂಗ್ರೆಸ್ (Congress) ಟ್ವೀಟ್​ ಮಾಡಿ ಬಿಜೆಪಿ ವಿರುದ್ಧ ​ವ್ಯಂಗ್ಯವಾಡಿದೆ.

‘ಪ್ರಧಾನಿ ನರೇಂದ್ರ ಮೋದಿ ಮುಖ ತೋರಿಸಿದರೂ ವೋಟು ಗಿಟ್ಟುವುದಿಲ್ಲ. ಸಿಎಂ ಬೊಮ್ಮಾಯಿ ಮುಖ ತೋರಿಸಿದರೂ ಮತ ಬರುವುದಿಲ್ಲ. ಹಾಗಾಗಿ ಸಿಎಂ ಬೊಮ್ಮಾಯಿ ಚಿತ್ರನಟರ ಮುಂದೆ ಶರಣಾಗಿದ್ದಾರೆ. ಬಿಜೆಪಿಗೆ ರಾಜಕೀಯ ನಾಯಕರಿಲ್ಲದ ಕಾರಣ ಸಿನಿಮಾ ನಟರ ಮೊರೆ ಹೋಗಿದೆ!. ಬಿಎಸ್​ ಯಡಿಯೂರಪ್ಪ ಅವರ ಮುಖವನ್ನು ಮರೆಮಾಚಲು ಬಿಜೆಪಿ ಮುಂದಾಗಿದೆ. ಬಿಜೆಪಿಗೆ ಈಗ ವರ್ಚಸ್ಸು ನಾಯಕರಿಲ್ಲದಿರುವುದು ದುರಂತ ಎಂದು ಟ್ವೀಟ್​ ಮೂಲಕ ರಾಜ್ಯ ಕಾಂಗ್ರೆಸ್​ ಹರಿಹಾಯ್ದಿದೆ.

ಇನ್ನು ಈ ವಿಚಾರವಾಗಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್​ ಮಾತನಾಡಿ ಕಲಾವಿದರು ತಮಗೆ ಬೇಕಾದವರನ್ನು ಚುನಾವಣೆಯಲ್ಲಿ ಬೆಂಬಲಿಸ್ತಾರೆ. ಇದರಿಂದ ನಮಗೆ ಯಾವುದೇ ಅಭ್ಯಂತರವಿಲ್ಲ. ಸರ್ಕಾರ ಸಿನಿಮಾ ನಟರ ಮೇಲೆ ಒತ್ತಡ ಹಾಕಿರಬಹುದು ಅಥವಾ ನಟರ ಬಳಿ ಮನವಿ ಮಾಡಿಕೊಂಡಿರಬಹುದು. ರಾಜಕಾರಣದ ಉದ್ದೇಶದಿಂದ ನಾನು ಸುದೀಪ್​ ಭೇಟಿಯಾಗಿಲ್ಲ. ನಾನು ಮತ್ತು ನಟ ಸುದೀಪ್ ಹಳೇ ಸ್ನೇಹಿತರು. ನನ್ನ ಮತ್ತು ಸುದೀಪ್ ನಡುವೆ ರಾಜಕೀಯ ಚರ್ಚೆ ನಡೆದಿಲ್ಲ ಎಂದಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here