SHOCKING| ಮತ್ತೊಂದು ಅಪಘಾತ: ಎರಡು ಭಾಗಗಳಾಗಿ ಬೇರ್ಪಟ್ಟ ಎಕ್ಸ್‌ಪ್ರೆಸ್‌ ರೈಲು!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಒರಿಸ್ಸಾ ರೈಲು ಅಪಘಾತದ ಘಟನೆ ಮರೆಯುವ ಮುನ್ನವೇ.. ಮತ್ತೊಂದು ದೊಡ್ಡ ರೈಲು ಅಪಘಾತ ಸ್ವಲ್ಪದರಲ್ಲೇ ತಪ್ಪಿದೆ. ಲೋಹಿತ್ ಎಕ್ಸ್ ಪ್ರೆಸ್ ರೈಲಿನ 10 ಬೋಗಿಗಳು ಎಂಜಿನ್ ನಿಂದ ಬೇರ್ಪಟ್ಟಿದೆ. ಅಸ್ಸಾಂನ ಗುವಾಹಟಿಯಿಂದ ಜಮ್ಮುವಿನ ತಪೈಗೆ ತೆರಳುತ್ತಿದ್ದಾಗ ಈ ಅವಘಡ ಸಂಭವಿಸಿದೆ. ಸುಮಾರು 10 ಬೋಗಿಗಳು ಎಂಜಿನ್ ನಿಂದ ಬೇರ್ಪಟ್ಟು ಹಳಿಗಳ ಮೇಲೆ ನಿಂತಿದ್ದವು. ಏನಾಗುತ್ತಿದೆ ಎಂದು ತಿಳಿಯದೆ ಪ್ರಯಾಣಿಕರು ಗಾಬರಿಗೊಂಡರು. ಕೆಲವರು ಭಯದಿಂದ ರೈಲಿನಿಂದ ಕೆಳಗೆ ಹಾರಿದ ಘಟನೆ ನಡೆದಿದೆ.

ಪಶ್ಚಿಮ ಬಂಗಾಳದ ಉತ್ತರ ದಿನಾಜ್‌ಪುರ ಜಿಲ್ಲೆಯ ದಲ್‌ಖೋಲಾ ಮತ್ತು ಬಿಹಾರದ ಕಿಶನ್‌ಗಂಜ್ ನಡುವಿನ ಸೂರ್ಯಕಮಲ್ ರೈಲು ನಿಲ್ದಾಣದ ಬಳಿ ಮಂಗಳವಾರ ಸಂಜೆ 4.30 ರ ಸುಮಾರಿಗೆ ಈ ಘಟನೆ ನಡೆದಿದೆ. ಇಂಜಿನ್ ಮುಂದಕ್ಕೆ ಚಲಿಸುತ್ತಿದ್ದಂತೆ, ಸುಮಾರು ಹತ್ತು ಬೋಗಿಗಳು ಹಳಿಗಳ ಮೇಲೆ ಸಿಲುಕಿಕೊಂಡವು. ಮಾಹಿತಿ ಪಡೆದ ರೈಲ್ವೆ ಅಧಿಕಾರಿಗಳು ಘಟನಾ ಸ್ಥಳಕ್ಕೆ ಆಗಮಿಸಿ ಆ ಮಾರ್ಗದಲ್ಲಿ ರೈಲುಗಳನ್ನು ನಿಲ್ಲಿಸಿದರು.

ನಂತರ ಬೇರ್ಪಡಿಸಿದ ಬೋಗಿಗಳನ್ನು ಎಂಜಿನ್‌ಗೆ ಮರು ಜೋಡಿಸಲಾಯಿತು. ಘಟನೆಯಲ್ಲಿ ಯಾವುದೇ ಪ್ರಾಣಹಾನಿಯಾಗಿಲ್ಲ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ. ಆದರೆ ರೈಲು 16 ಗಂಟೆ ತಡವಾಗಿ ತನ್ನ ಗಮ್ಯಸ್ಥಾನವನ್ನು ತಲುಪಿತು. ಇದಕ್ಕೆ ಸಂಬಂಧಿಸಿದ ವಿಡಿಯೋವೊಂದು ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಕಪ್ಲಿಂಗ್ ವೈಫಲ್ಯದಿಂದ ರೈಲು ಬೋಗಿಗಳು ಬೇರ್ಪಟ್ಟ ಹಾಗೆ ತೋರುತ್ತದೆ ಒರಿಸ್ಸಾ ರೈಲು ಅಪಘಾತದ ನಂತರ, ರೈಲು ಅಪಘಾತಗಳಿಗೆ ಸಂಬಂಧಿಸಿದಂತೆ ಸಾಕಷ್ಟು ಘಟನೆಗಳು ನಡೆದಿವೆ. ಇದರಿಂದಾಗಿ ಪ್ರಯಾಣಿಕರು ರೈಲಿನಲ್ಲಿ ಪ್ರಯಾಣಿಸಲು ಭಯಪಡುತ್ತಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!