ಇಸ್ರೇಲ್ ಕೊಟ್ಟ ಗಡುವು ಮುಕ್ತಾಯ, ಮೂರೇ ಗಂಟೆಯಲ್ಲಿ10 ಲಕ್ಷ ಮಂದಿ ಪಲಾಯನ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಗಾಜಾದಲ್ಲಿ ಪರಿಸ್ಥಿತಿ ತೀವ್ರ ಭೀಕರವಾಗಿದ್ದು, ಹಮಾಸ್ ಉಗ್ರರು ಹಾಗೂ ಇಸ್ರೇಲ್ ಸೇನೆ ಮಧ್ಯೆ ಕಾಳಗ ನಡೆಯುತ್ತಲೇ ಇದೆ. ಈ ಮಧ್ಯೆ ಗಾಜಾದಲ್ಲಿ ಇರುವವರಿಗೆ ದಕ್ಷಿಣ ಭಾಗಕ್ಕೆ ತೆರಳುವಂತೆ ಮೂರು ಗಂಟೆಯ ಗಡುವು ನೀಡಲಾಗಿತ್ತು.

Israel prepares for ground assault on Gaza as Palestinians struggle to fleeಕೇವಲ ಮೂರು ಗಂಟೆ ಅವಧಿಯಲ್ಲಿ 10 ಲಕ್ಷ ಮಂದಿ ಗಾಜಾದಿಂದ ಪಲಾಯನ ಮಾಡಿದ್ದಾರೆ. ಮೂರು ಗಂಟೆಗಳ ಕಾಲ ಯಾವುದೇ ಕಾರ್ಯಾಚರಣೆ ನಡೆಸುವುದಿಲ್ಲ. ತದನಂತರ ವಾಯು, ಜಲ ಹಾಗೂ ಭೂಮಿಯ ಮೂಲಕ ದಾಳಿ ನಡೆಸಲಾಗುತ್ತದೆ.

Hamas blocking evacuation of civilians in Gaza: IDF ahead of ground  offensive - The Economic Timesಈ ಮೂರು ಗಂಟೆಯ ಅವಧಿಯಲ್ಲಿ ಹೊರಡುವವರು ಹೊರಡಿ ಎಂದು ಇಸ್ರೇಲ್ ಹೇಳಿದ್ದು, ಒಂದು ಮಿಲಿಯನ್ ಮಂದಿ ಪಲಾಯನ ಮಾಡಿದ್ದಾರೆ. ಗಾಜಾದಲ್ಲಿ ಇರುವ ಹಮಾಸ್ ಉಗ್ರರನ್ನು ಮಟ್ಟಹಾಕುವ ಮುನ್ನ ಅಮಾಯಕ ಜೀವಗಳು ಬಲಿಯಾಗದಂತೆ ನೋಡಿಕೊಳ್ಳಳು ಇಸ್ರೇಲ್ ಈ ಕ್ರಮ ಕೈಗೊಂಡಿದೆ.

Israel prepares ground assault on Gaza as Palestinians fleeಈಗಾಗಲೇ 1,300 ಕ್ಕೂ ಹೆಚ್ಚು ಮಂದಿ ಇಸ್ರೇಲಿಗರು ಪ್ರಾಣ ಕಳೆದುಕೊಂಡಿದ್ದಾರೆ, ದಶಕಗಳಲ್ಲೇ ನಡೆದ ಭೀಕರ ದಾಳಿ ಇದಾಗಿದೆ. ಇಸ್ರೇಲ್ ಸೇನೆ ಗಾಜಾ ಗಡಿಯಲ್ಲಿ 30 ಸಾವಿರಕ್ಕೂ ಹೆಚ್ಚು ಸೈನಿಕರನ್ನು ನೇಮಿಸಿದೆ. ಇನ್ನು ಕನಿಷ್ಠ 10,000 ಸೈನಿಕರು ಈಗಾಗಲೇ ಗಾಜಾ ಕಡೆಗೆ ಹೆಜ್ಜೆಯಿಟ್ಟಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!