ಹೊಸದಿಗಂತ ವರದಿ, ಮಡಿಕೇರಿ
ಮಡಿಕೇರಿಯಲ್ಲಿ ನಿರ್ಮಾಣವಾಗಲಿರುವ ಕನ್ನಡ ಸಾಹಿತ್ಯ ಪರಿಷರ್ ಭವನಕ್ಕೆ 10ಲಕ್ಷ ರೂ.ಗಳ ಅನುದಾನ ನೀಡುವುದಾಗಿ ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಸಿ.ಸೋಮಶೇಖರ್ ಅವರು ಭರವಸೆ ನೀಡಿದ್ದಾರೆ.
ಕಾಸರಗೋಡಿನ ಕಾರ್ಯಕ್ರಮವೊಂದಕ್ಕೆ ತೆರಳುವ ಸಂದರ್ಭ, ಮಡಿಕೇರಿಯ ಸುದರ್ಶನ ಅತಿಥಿ ಗೃಹಕ್ಕೆ ಆಗಮಿಸಿದ ಅವರನ್ನು ಕೊಡಗು ಲೇಖಕ ಮತ್ತು ಕಲಾವಿದರ ಬಳಗ ಮತ್ತು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಂಪಿ.ಕೇಶವ ಕಾಮತ್ ಮತ್ತು ಇತರ ಪ್ರಮುಖರು ಭೇಟಿ ಮಾಡಿ ಗಡಿ ಉತ್ಸವದ ಬಗ್ಗೆ ಚರ್ಚಿಸಿದರು.
ಆ ಸಂದರ್ಭದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಕನ್ನಡ ಸಾಹಿತ್ಯ ಭವನಕ್ಕೂ ಅನುದಾನ ಕೋರಿದಾಗ ಅವರು ಹತ್ತು ಲಕ್ಷ ರೂ.ಗಳನ್ನು ನೀಡುವುದಾಗಿ ಭರವಸೆ ನೀಡಿದರು.
ಅಲ್ಲದೆ ಸದ್ಯದಲ್ಲೇ ಕೊಡಗು ಜಿಲ್ಲೆಗೆ ಪ್ರವಾಸ ಬರಲಿದ್ದು, ಮಡಿಕೇರಿಯಲ್ಲಿ ನಿರ್ಮಾಣ ಹಂತದಲ್ಲಿರುವ ಕನ್ನಡ ಭವನವನ್ನು ಪರಿಶೀಲಿಸುವುದಾಗಿ ಮತ್ತು ಮುಂದಿನ ತಿಂಗಳುಗಳಲ್ಲಿ ಜಿಲ್ಲಾ ಗಡಿ ಉತ್ಸವಕ್ಕೆ ಅನುದಾನ ನೀಡುವುದಾಗಿ ತಿಳಿಸಿದರು.
ಈ ಸಂದರ್ಭ ಪರಿಷತ್’ನ ಮಾಜಿ ಜಿಧ್ಯಕ್ಷ ಟಿ.ಪಿ ರಮೇಶ್, ಪದಾಧಿಕಾರಿಗಳಾದ ಮುನೀರ್ ಅಹಮದ್, ಅಂಬೆಕಲ್ ನವೀನ್ ಮತ್ತು ಕಡ್ಲೇರ ತುಳಸಿ ಮೋಹನ್ ಹಾಜರಿದ್ದರು.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ