100 ಕೋಟಿ ರೂ. ಪೋಂಜಿ ಹಗರಣ: ನಟ ಪ್ರಕಾಶ್ ರಾಜ್ ಗೆ ಇಡಿ ಸಮನ್ಸ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
 
ಆಭರಣ ವ್ಯಾಪ್ಯಾರ ಕಂಪನಿ ಎದುರಿಸುತ್ತಿರುವ 100 ಕೋಟಿ ರೂ. ಪೋಂಜಿ ಹಗರಣಕ್ಕೆ (Rs 100 Crore Ponzi Scam) ಸಂಬಂಧಿಸಿದಂತೆ ದಕ್ಷಿಣ ಭಾರತದ (South India) ಖ್ಯಾತ ನಟ ಪ್ರಕಾಶ್ ರಾಜ್ ಗೆಜಾರಿ ನಿರ್ದೇಶನಾಲಯವು (Enforcement Directorate) ಸಮನ್ಸ್ ಜಾರಿ ಮಾಡಿದೆ.

ಪ್ರಕಾಶ್ ರಾಜ್ ಬ್ರಾಂಡ್ ಅಂಬಾಸಿಡರ್ ಆಗಿದ್ದ ಪ್ರಣವ್ ಜ್ಯುವೆಲರ್ಸ್‌ ಹೂಡಿಕೆದಾರರಿಗೆ 100 ಕೋಟಿ ರೂ. ವಂಚಿಸಿದೆ.ಇದಕ್ಕೆ ಸಂಬಂಧಿಸಿದಂತೆ ನಟ ಪ್ರಕಾಶ್ ರಾಜ್ ಅವರನ್ನು ವಿಚಾರಣೆಗಾಗಿ ಜಾರಿ ನಿರ್ದೇಶನಾಲಯ ಸಮನ್ಸ್ ನೀಡಿದೆ.

ಚೆನ್ನೈ ಸೇರಿದಂತೆ ತಮಿಳುನಾಡು ಮತ್ತು ಪುದುಚೇರಿಯಲ್ಲಿ ಹಲವು ಸ್ಥಳಗಳಲ್ಲಿ ಶಾಖೆಗಳನ್ನು ಹೊಂದಿರುವ ತಿರುಚ್ಚಿ ಮೂಲದ ಆಭರಣ ಸರಪಳಿಯ ಶಾಖೆಗಳ ಮೇಲೆ ಇಡಿ ದಾಳಿ ನಡೆಸಿದೆ, ಪೋಂಜಿ ಯೋಜನೆಯನ್ನು ನಡೆಸುತ್ತಿದೆ ಮತ್ತು ಹೂಡಿಕೆದಾರರಿಗೆ ₹ 100 ಕೋಟಿ ವಂಚಿಸಿದೆ ಎಂದು ಆರೋಪಿಸಲಾಗಿದೆ. ಈ ಕಂಪನಿಯ ಬ್ರ್ಯಾಂಡ್ ಅಂಬಾಸಿಡರ್ ಆದ ಕಾರಣದಿಂದಲೇ ಪ್ರಕಾಶ್ ರಾಜ್ ಅವರಿಗೂ ಜಾರಿ ನಿರ್ದೇಶನಾಲಯವು ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ನೀಡಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!