ಆಯುಧ ಪೂಜೆಗೆ 100 ರೂ. ಕೊಟ್ಟ ಸರಕಾರ: ಆಕ್ರೋಶದ ಬೆನ್ನಲ್ಲೇ ಮೊತ್ತ ಹೆಚ್ಚಿಸಿದ ಕೆಎಸ್‌ಆರ್‌ಟಿಸಿ!

ಹೊಸ ದಿಗಂತ ಡಿಜಿಟಲ್ ಡೆಸ್ಕ್: 

ಆಯುಧ ಪೂಜೆ ದಿನ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಬಸ್‌ಗಳ ಪೂಜೆಗಾಗಿ ಕೇವಲ 100 ರೂಪಾಯಿಯನ್ನು ನೌಕರರಿಗೆ ನೀಡಿದ್ದು ವಿವಾದಕ್ಕೆ ಕಾರಣವಾಗಿತ್ತು. ಜೊತೆಗೆ ಆಕ್ರೋಶ ಕೂಡ ವ್ಯಕ್ತವಾಗಿತ್ತು.

ಇದರ ಬೆನ್ನಲ್ಲಿಯೇ ಎಚ್ಚೆತ್ತಿರುವ ಸಾರಿಗೆ ಹಾಗೂ ಮುಜರಾಯಿ ಇಲಾಖೆ ಸಚಿವ ರಾಮಲಿಂಗಾ ರೆಡ್ಡಿ, ಆಯುಧ ಪೂಜೆಯ ಬಾಬ್ತು ಏರಿಕೆ ಮಾಡುವ ಆದೇಶ ನೀಡಿದ್ದಾರೆ. 100 ರೂಪಾಯಿಯ ಬದಲಿಗೆ ಪ್ರತಿ ಬಸ್‌ಗೆ 250 ರೂಪಾಯಿ ಹಣವನ್ನು ನೀಡಲು ಕೆಎಸ್‌ಆರ್‌ಟಿಸಿ ತೀರ್ಮಾನ ಮಾಡಿದೆ.

ಬಸ್‌ ಪೂಜೆ ಹಾಗೂ ಅಲಂಕಾರಕ್ಕಾಗಿ ಕೇವಲ 100 ರೂಪಾಯಿ ನೀಡಿದ್ದರ ಬಗ್ಗೆ ಸುದ್ದಿಯಾಗುತ್ತಲೇ ಕೆಎಸ್‌ಆರ್‌ಟಿಸಿ ವಿರುದ್ಧ ಆಕ್ರೋಶ ವ್ಯಕ್ತವಾಗಿತ್ತು. ಘಟಕದಲ್ಲಿ ಸುಮಾರು 100 ರಿಂದ 500 ಬಸ್ಸುಗಳು ಇದ್ದು ಒಂದು ಬಸ್ಸಿಗೆ ರೂ. 100 ಎಂದು ಒಂದು ಘಟಕಕ್ಕೆ / ಕಾರ್ಯಾಗಾರಕ್ಕೆ ನೀಡಲಾಗುತ್ತದೆ. 2008 ರವರೆಗೂ ಪ್ರತಿ‌ ಬಸ್‌ಗಳಿಗೆ ಸಾರಿಗೆ ಸಂಸ್ಥೆ 10 ರೂಪಾಯಿ ನೀಡುತ್ತಿತ್ತು. 2009 ರಲ್ಲಿ ಪ್ರತಿ ಬಸ್ಸಿಗೆ ರೂ 30 ಕ್ಕೆ ಏರಿಕೆ ಮಾಡಲಾಗಿತ್ತು. 2016 ರಲ್ಲಿ ಪ್ರತಿ ಬಸ್ಸಿಗೆ ರೂ.50 ಕ್ಕೆ ಏರಿಕೆ , 2017 ರಲ್ಲಿ ಪ್ರತಿ‌ ಬಸ್ಸಿಗೆ ರೂ.100 ಕ್ಕೆ ಏರಿಕೆ ‌ಮಾಡಲಾಗಿತ್ತು.2023 ರವರೆಗೂ ಈ ಮೊತ್ತ 100 ರೂಪಾಯಿಯೇ ಆಗಿತ್ತು. ಪ್ರಸಕ್ತ ವರ್ಷದಲ್ಲಿ ಆಯುಧಪೂಜೆಗೆ ಪ್ರತಿ‌ ಬಸ್ಸಿಗೆ ಈಗ ನೀಡಲಾಗುತ್ತಿರುವ ರೂ.100 ಅನ್ನು ರೂ.250 ಕ್ಕೆ ಹೆಚ್ಚಿಸಲು ಸಾರಿಗೆ ಹಾಗೂ ಮುಜರಾಯಿ ಸಚಿವರು ಆದೇಶ ಹೊರಡಿಸಿದೆ.

ಇದಕ್ಕೂ ಮುನ್ನ ನೀಡಿದ ಆದೇಶದಲ್ಲಿ ಕಳೆದ ವರ್ಷದಂತೆ ಈ ಬಾರಿಯೂ ಪುಡಿಗಾಸು ಕೊಟ್ಟು ಸಾರಿಗೆ ನಿಗಮ ಕೈತೊಳೆದುಕೊಂಡಿತ್ತು. ಆಯುಧ ಪೂಜೆ ಸ್ಚಚ್ಚತೆ,ಅಲಂಕಾರಕ್ಕೆ ಕೇವಲ 100 ರೂಪಾಯಿ ನೀಡಿತ್ತು. ಪೂಜೆಗೆ ತಲಾ ಒಂದು ಬಸ್‌ಗೆ ಕೇವಲ 100 ರೂಪಾಯಿ ನೀಡಲಾಗಿತ್ತು. ಪ್ರತಿಯೊಂದು ಬಸ್‌ನ ಸ್ಚಚ್ಚತೆ ಅಲಂಕಾರ ಮತ್ತು ನಿರ್ವಹಣೆಗೆ ನೀಡಿದ ಹಣ ಕಡಿಮೆ ಎನ್ನುವ ಆರೋಪ ಕೇಳಿ ಬಂದಿತ್ತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!