ಹೊಸದಿಗಂತ ವರದಿ ಮೈಸೂರು:
ಶಾಲೆಗಳಲ್ಲಿ ಪ್ರತಿ ತಿಂಗಳು ಪ್ರತಿ ಮಗುವಿನ ಪೋಷಕರಿಂದ ನೂರು ರೂ ಸಂಗ್ರಹ ಮಾಡುವ ಆದೇಶ ವನ್ನು ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿದೆ, ನಮ್ಮ ಬಿಜೆಪಿ ಸರ್ಕಾರ ವಲ್ಲ ಎಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ತಿಳಿಸಿದರು. ಶನಿವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಎಲ್ ಕೆಜಿ, ಯುಕೆಜಿಯನ್ನು ಜಾರಿಗೆ ತರಲಾಗಿದೆ. ಆ ಶಿಕ್ಷಕರಿಗೆ ಸರ್ಕಾರದಿಂದ ಸಂಬಳ ನೀಡುತ್ತಿಲ್ಲ, ಶಾಲಾಭಿವೃದ್ದಿ ಸಮಿತಿಯವರೇ ನೀಡಬೇಕು. ಆರ್ ಟಿಇ ಕಾಯ್ದೆಯ ಲ್ಲಿ ಶಾಲಾಭಿವೃದ್ಧಿಗಾಗಿ ದಾನಿಗಳಿಂದ ಧನ ಸಂಗ್ರಹ ಮಾಡಬಹುದು ಎಂದು ಹೇಳಲಾಗಿದೆ.
ಹಾಗಾಗಿ ಶಾಲಾಭಿವೃದ್ದಿ ಸಮಿತಿ ಯವರು ಪೋಷಕರಿಂದ ಪ್ರತಿ ತಿಂಗಳು ಹಣ ಸಂಗ್ರಹ ಮಾಡುವ ಕುರಿತು ಸ್ಪಷ್ಟ ನೆ ಕೇಳಿದ್ದರಿಂದ ಶಿಕ್ಷಣ ಇಲಾಖೆಯ ಆಯುಕ್ತರು ಪೋಷಕ ರು ಹಾಗೂ ದಾನಿಗಳಿಂದ ನೂರು ರೂ ತನಕ ಮಾತ್ರ ಸಂಗ್ರಹಿಸಬಹುದು ಎಂದು ಸುತ್ತೋಲೆ ಹೊರಡಿಸಿದ್ದಾರೆ.
ನೂರು ರೂಗಿಂತ ಹೆಚ್ಚಾಗಿ ಹಣ ಸಂಗ್ರಹಿಸುವಂತಿಲ್ಲ, ಪಡೆದ ಹಣಕ್ಕೆ ರಸೀದಿ ನೀಡಬೇಕು, ಯಾರಿಂದಲೂ ಬಲವಂತವಾಗಿ ಹಣ ಸಂಗ್ರಹ ಮಾಡಬಾರದು ಎಂದು ತಿಳಿಸಿದ್ದಾರೆ. ಈ ಸುತ್ತೋಲೆ ಯನ್ನು ಸರಿಯಾಗಿ ಓದದ ಮಾಜಿ ಸಿಎಂ ಸಿದ್ದರಾಮಯ್ಯ ಟೀಕೆ ಮಾಡಿರುವುದು ಅವರ ಅಜ್ಞಾನ ವನ್ನು ತಿಳಿಸುತ್ತದೆ.
ಇದನ್ನು ಅವರಿಂದ ನಾನು ನಿರೀಕ್ಷೆ ಮಾಡಿರಲಿಲ್ಲ, ಸಿದ್ದರಾಮಯ್ಯ ಸರ್ಕಾರದ ಲ್ಲಿ ಹಣದ ಕೊರತೆ ಇಲ್ಲದಿದ್ದರೆ ಯಾಕೇ ಬೇಡಿಕೆ ಯಷ್ಟು ಶಾಲಾ ಕೊಠಡಿ, ಅಧ್ಯಾಪಕರ ನ್ನು ನೇಮಕ ಮಾಡಲಿಲ್ಲ ಎಂದು ವಾಗ್ದಾಳಿ ನಡೆಸಿದರು. ಪಠ್ಯ ದಲ್ಲಿ ನಾವು ಯಾವ ವಿಷಯ ವನ್ನು ಕೈಬಿಟ್ಟಿಲ್ಲ, ಯಾವೆಲ್ಲ ಸತ್ಯ ದ ವಿಷಯ ಗಳನ್ನು ಕೈಬಿಡಲಾಗಿತ್ತೋ, ಅವುಗಳನ್ನೆಲ್ಲಾ ವಾಪಸ್ ತಂದಿದ್ದೇವೆ ಎಂದು ಹೇಳಿದರು.