ಈ ತಿಂಗಳು 10 ಸಾವಿರ ಸರ್ಕಾರಿ ಉದ್ಯೋಗಿಗಳ ನಿವೃತ್ತಿ: ಒಟ್ಟೂ ಟೆನ್ಷನ್‌ನಲ್ಲಿದೆ ಕೇರಳ ಸರ್ಕಾರ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕೇರಳ ರಾಜ್ಯ ಸರ್ಕಾರಕ್ಕೆ ಮತ್ತೊಂದು ಸಂಕಷ್ಟ ಎದುರಾಗಿದೆ. ರಾಜ್ಯ ಸರ್ಕಾರಿ ಸೇವೆಯಲ್ಲಿರುವವರ ಪೈಕಿ ಸುಮಾರು 10 ಸಾವಿರದಷ್ಟು ಮಂದಿ ಇದೇ 31ರಂದು ನಿವೃತ್ತರಾಗಲಿದ್ದು, ಅವರ ನಿವೃತ್ತಿ ಸೌಲಭ್ಯಕ್ಕಾಗಿನ ಹಣ ಹೊಂದಿಸಲು ಸರ್ಕಾರ ಸಾಹಸಪಡುತ್ತಿದೆ.

ಮೂಲಗಳ ಪ್ರಕಾರ, ಪರಿಚಾರಕರಿಂದ ಎ ಗ್ರೇಡ್ ಅಧಿಕಾರಿಗಳವರೆಗೆ, ಪ್ರತೀ ಉದ್ಯೋಗಿಗೆ ಹುದ್ದೆಗೆ ಅನುಗುಣವಾಗಿ 20 ಲಕ್ಷದಿಂದ 90ಲಕ್ಷ ರೂ.ಗಳವರೆಗೆ ಪಾವತಿಸಬೇಕಾಗಿದೆ. ಇದರ ಮೊತ್ತ ಸುಮಾರು ೩ ಸಾವಿರ ಕೋಟಿ ರೂ. ಎಂದು ಅಂದಾಜಿಸಲಾಗಿದೆ. ಒಂದೆಡೆ ಹಣಕಾಸು ಹೊಂದಾಣಿಕೆ ಚಿಂತೆಯಾದರೆ ಇನ್ನೊಂದೆಡೆ ಇಷ್ಟೊಂದು ಜನರು ಒಟ್ಟಿಗೆ ನಿವೃತ್ತರಾದಾಗ, ಅನೇಕ ಕಚೇರಿಗಳಲ್ಲಿ ಸಿಬ್ಬಂದಿ ಕೊರತೆ ಕಾಡಲಿರುವುದು ಸರ್ಕಾರಕ್ಕೆ ಇನ್ನೊಂದು ಚಿಂತೆಯಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!