ಹೊಸದಿಗಂತ ಡಿಜಿಟಲ್ ಡೆಸ್ಕ್:
ಪೇಶಾವರ ಮಸೀದಿಯಲ್ಲಿ ಸೋಮವಾರ ನಡೆದ ಆತ್ಮಾಹುತಿ ಬಾಂಬ್ ದಾಳಿಯಲ್ಲಿ 101 ಮಂದಿ ಮೃತಪಟ್ಟಿದ್ದು, ಪೊಲೀಸರು 17 ಶಂಕಿತರನ್ನು ಬಂಧಿಸಿದ್ದಾರೆ.
ಆತ್ಮಾಹುತಿ ಬಾಂಬ್ ದಾಳಿ ಇದಾಗಿದ್ದು, ಪ್ರಾರ್ಥನೆ ವೇಳೆ ಮೂರು ಸೆಕ್ಯುರಿಟಿ ಚೆಕ್ ದಾಟಿ ಬಂದ ಬಾಂಬರ್ ತನ್ನನ್ನು ತಾನು ಸಿಡಿಸಿಕೊಂಡಿದ್ದಾನೆ. ಸ್ಫೋಟದಿಂದ ಮಸೀದಿಯ ಒಂದು ಭಾಗದ ಗೋಡೆ ಕುಸಿದಿದ್ದು, ಮೃತರ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದೆ. 97 ಪೊಲೀಸರು ಸೇರಿದಂತೆ 101ಮಂದಿ ಪ್ರಾಣ ಬಿಟ್ಟಿದ್ದು, 17 ಮಂದಿ ಶಂಕಿತರನ್ನು ಅರೆಸ್ಟ್ ಮಾಡಲಾಗಿದೆ.
ತೆಹ್ರೀಕ್-ಎ- ತಾಲಿಬಾನ್ ಪಾಕಿಸ್ತಾನ ಉಗ್ರ ಸಂಘಟನೆ ಆತ್ಮಾಹುತಿ ದಾಳಿಯ ಹೊಣೆಯನ್ನು ಹೊತ್ತುಕೊಂಡಿದೆ.