103ರ ಅಜ್ಜನಿಗೂ 49ರ ಮಹಿಳೆಗೂ ಮದುವೆಯಂತೆ! ವೈರಲ್ ಸುದ್ದಿ ಇಲ್ಲಿದೆ..

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮಧ್ಯಪ್ರದೇಶದ ಭೋಪಾಲ್‌ನಲ್ಲಿ ಅತೀ ಅಪರೂಪದ ಮದುವೆಯೊಂದು ನೆರವೇರಿದೆ. 103 ವರ್ಷದ ಅಜ್ಜ 49 ವರ್ಷದ ಮಹಿಳೆಯನ್ನು ಮದುವೆಯಾಗಿದ್ದು, ಈ ಸುದ್ದಿ ಎಲ್ಲೆಡೆ ವೈರಲ್ ಆಗಿದೆ.

103 ರ ಅಜ್ಜ ಹಬೀಬ್ ನಜರ್ ಸ್ವಾತಂತ್ರ್ಯ ಹೋರಾಟದಲ್ಲಿ ಗುರುತಿಸಿಕೊಂಡಿದ್ದಾರೆ. ಇವರಿಗೆ ಇದು ಮೂರನೇ ಮದುವೆ. ಎರಡನೇ ಪತ್ನಿ ಮರಣಾನಂತರ ಹಬೀಬ್ ಒಂಟಿತನ ಎದುರಿಸುತ್ತಿದ್ದರು ಎನ್ನಲಾಗಿದೆ.

ಇದೇ ಕಾರಣಕ್ಕೆ 49ವರ್ಷದ ಫಿರೋಜ್ ಜಹಾನ್‌ರನ್ನು ಮದುವೆಯಾಗಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಈ ಜೋಡಿಗೆ ಎಲ್ಲರೂ ಶುಭ ಹಾರೈಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!