ಅಯೋಧ್ಯೆ ರಾಮ ಮಂದಿರ ಕಡೆಗೆ ಹೊರಟ 108 ಅಡಿ ಉದ್ದದ ಅಗರಬತ್ತಿ ಯಾತ್ರೆ

ಹೊಸದಿಂಗತ ಡಿಜಿಟಲ್ ಡೆಸ್ಕ್:

ಪ್ರಾಣ ಪ್ರತಿಷ್ಠಾಪನೆಗೊಳ್ಳಲಿರುವ ಅಯೋಧ್ಯೆಯ ಶ್ರೀರಾಮ ಮಂದಿರಕ್ಕೆ ದೈವಿಕ ಪರಿಮಳವನ್ನು ತುಂಬಲು ಗುಜರಾತ್‌ನ ವಡೋದರಾದಿಂದ ಹೊರಟ 108 ಅಡಿ ಉದ್ದದ ಅಗರಬತ್ತಿ ಉತ್ತರಪ್ರದೇಶ ತಲುಪಿದ್ದು, ಅಯೋಧ್ಯೆಯತ್ತ ಬರುತ್ತಿದೆ.

ಈ ಧೂಪದ್ರವ್ಯವು ಸೋಮವಾರ ಆಗ್ರಾದ ಫತೇಪುರ್ ಸಿಕ್ರಿ ಮತ್ತು ಕಿರಾವಲಿಗೆ ತಲುಪಿತ್ತು. ನೂರಾರು ಜನರು ಹೆದ್ದಾರಿಯಲ್ಲಿ ಅಗರಬತ್ತಿಯನ್ನು ಸ್ವಾಗತಿಸಿ ಪುಷ್ಪವೃಷ್ಟಿ ಮಾಡಿದರಲ್ಲದೆ, “ಜೈ ಶ್ರೀ ರಾಮ್” ಘೋಷಣೆಗಳನ್ನು ಕೂಗಿದರು. ಬರೋಡದಿಂದ ಆರಂಭವಾದ ಅಗರಬತ್ತಿಯ ಯಾತ್ರೆ ಮೆರವಣಿಗೆ ಮೂಲಕ ಇದೀಗ ಉತ್ತರಪ್ರದೇಶ ತಲುಪಿದೆ.

ರಾಮ ಮಂದಿರದ ಉದ್ಘಾಟನೆಯ ಸಂದರ್ಭದಲ್ಲಿ ಬಳಸಲು ವಡೋದರಾ ನಗರದಲ್ಲಿ ಬರೋಬ್ಬರಿ 108 ಅಡಿ ಉದ್ದ ಮತ್ತು 3.5 ಅಡಿ ಅಗಲದ ಈ ಅಗರಬತ್ತಿ ತಯಾರಿಸಲಾಗಿತ್ತು. ಇದು 3,610 ಕಿಲೋಗ್ರಾಂ ತೂಕವಿದ್ದು, ರಸ್ತೆಯ ಮೂಲಕ ಇದನ್ನು ಅಯೋಧ್ಯೆಗೆ ಸಾಗಿಸಲಾಗುತ್ತಿದೆ. ವಡೋದರಾದ ತರ್ಸಾಲಿ ಪ್ರದೇಶದ ನಿವಾಸಿ ವಿಹಾಭಾಯ್ ಭರ್ವಾಡ್ ಎಂಬುವವರು ಆರು ತಿಂಗಳಿನಿಂದ ತಮ್ಮ ಮನೆಯಲ್ಲೇ ಈ ಅಗರಬತ್ತಿಯನ್ನು ತಯಾರಿಸಿದ್ದಾರೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!