ಹೊಸದಿಗಂತ ಡಿಜಿಟಲ್ ಡೆಸ್ಕ್:
ಐತಿಹಾಸಿಕ ಧಾರ್ಮಿಕ ಕಾರ್ಯಕ್ರಮ ಮಹಾಕುಂಭ ಉತ್ತರ ಪ್ರದೇಶದ ಪ್ರಯಾಗ್ ರಾಜ್ ನಲ್ಲಿ ನೆರವೇರುತ್ತಿದ್ದು ದೇಶದ ನಾನಾ ಭಾಗಗಳಿಂದ ಭಕ್ತರು ಆಗಮಿಸುತ್ತಿದ್ದಾರೆ. ವಿದೇಶಗಳಿಂದಲೂ ಜನರು ಬರುತ್ತಿದ್ದಾರೆ.
ಮಹಾಕುಂಭ ಆರಂಭವಾದಾಗಿನಿಂದ ಇಲ್ಲಿಯವರೆಗೆ 11 ದಿನಗಳಲ್ಲಿ, 97.3 ಮಿಲಿಯನ್‌ಗಿಂತಲೂ (9,73,00,000) ಹೆಚ್ಚು ಭಕ್ತರು, ಕಲ್ಪವಾಸಿಗಳು ಮತ್ತು ವಿವಿಧ ಮಠಾಧೀಶರು ಆಗಮಿಸಿ ತ್ರಿವೇಣಿ ಸಂಗಮದಲ್ಲಿ ಪವಿತ್ರ ಸ್ನಾನ ಮಾಡಿದ್ದಾರೆ.
ಉತ್ಸವದ 11 ನೇ ದಿನದ ಇಂದಿನ ಅಂತ್ಯದ ವೇಳೆಗೆ ಒಟ್ಟು ಭಾಗವಹಿಸುವವರ ಸಂಖ್ಯೆ 100 ಮಿಲಿಯನ್ ಗಡಿಯನ್ನು ತಲುಪುವ ನಿರೀಕ್ಷೆಯಿದೆ.