11 ಔಷಧಗಳ ಬೆಲೆ ಹೆಚ್ಚಿಸಿದ ಸರ್ಕಾರ: ಯಾವುವು ಈ ಮೆಡಿಸಿನ್?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಔಷಧ ತಯಾರಿಕೆಯ ವೆಚ್ಚ ಹೆಚ್ಚಾದ ಕಾರಣ ಕೆಲ ಔಷಧಗಳ ಸೀಲಿಂಗ್ ಪ್ರೈಸ್ ಅಥವಾ ಗರಿಷ್ಠ ಬೆಲೆ ಮಟ್ಟವನ್ನು ಹೆಚ್ಚಿಸಿದೆ. ಎಂಟು ಔಷಧಗಳ 11 ಔಷಧ ಸಂಯೋಜನೆಗಳ ಗರಿಷ್ಠ ಬೆಲೆಯನ್ನು ಶೇ. 50ರಷ್ಟು ಹೆಚ್ಚಿಸುವ ನಿರ್ಧಾರಕ್ಕೆ ರಾಷ್ಟ್ರೀಯ ಔಷಧ ಬೆಲೆ ನಿರ್ಧಾರ ಪ್ರಾಧಿಕಾರ (ಎನ್​ಪಿಪಿಎ- ನ್ಯಾಷನಲ್ ಫಾರ್ಮಸ್ಯೂಟಿಕಲ್ ಪ್ರೈಸಿಂಗ್ ಅಥಾರಿಟಿ) ಅನುಮೋದನೆ ನೀಡಿದೆ.

ಔಷಧ ತಯಾರಿಕೆಯಲ್ಲಿ ಬಳಸಲಾಗುವ ಮೂಲ ಸಾಮಗ್ರಿಗಳಾದ ಎಪಿಐಗಳ ವೆಚ್ಚ ಹೆಚ್ಚಾಗಿದೆ. ಉತ್ಪಾದನಾ ವೆಚ್ಚ ಹೆಚ್ಚಾಗಿದೆ. ವಿನಿಮಯ ದರದಲ್ಲಿ ವ್ಯತ್ಯಯವಾಗಿದೆ. ಇವೇ ಮುಂತಾದ ಕಾರಣಕ್ಕೆ ಔಷಧಗಳ ತಯಾರಿಕೆ ವ್ಯವಹಾರ ಲಾಭದಾಯಕವಾಗಿ ಉಳಿದಿಲ್ಲ. ಈ ಔಷಧಗಳ ಉತ್ಪಾದನೆಯನ್ನೇ ನಿಲ್ಲಿಸಬೇಕಾಗಬಹುದು ಎಂದು ಔಷಧ ಉತ್ಪಾದಕರು ಎನ್​ಪಿಪಿಎ ಬಳಿ ಹಲವು ಬಾರಿ ಆತಂಕ ತೋಡಿಕೊಂಡಿದ್ದವು.ಹೀಗಾಗಿ ಎನ್​ಪಿಪಿಎ ಸಂಸ್ಥೆಯು ಔಷಧಗಳ ಸೀಲಿಂಗ್ ಪ್ರೈಸ್ ನಿರ್ಧಾರ ಮಾಡಿದೆ.

ಶೇ. 50ರಷ್ಟು ಗರಿಷ್ಠ ಬೆಲೆ ಹೆಚ್ಚಳ ಕಂಡಿರುವ 11 ಔಷಧಗಳು
ಬೆಂಜೈಲ್ ಪೆನಿಸಿಲಿನ್ ಐಯು ಇಂಜೆಕ್ಷನ್
ಆಟ್ರೋಪೈನ್ ಇಂಜೆಕ್ಷನ್ ಒಂದು ಎಂಎಲ್​ಗೆ 0.6 ಎಂಎಲ್.
ಸ್ಟ್ರೆಪ್ಟೋಮೈಸಿನ್ ಔಡರ್ 750 ಎಂಜಿ
ಸ್ಟ್ರೆಪ್ಟೋಮೈಸಿನ್ ಔಡರ್ 1000 ಎಂಜಿ
ಸಾಲ್​ಬುಟಮಾಲ್ ಟ್ಯಾಬ್ಲೆಟ್ 2 ಎಂಜಿ
ಸಾಲ್​ಬುಟಮಾಲ್ ಟ್ಯಾಬ್ಲೆಟ್ 4 ಎಂಜಿ
ರೆಸ್ಪಿರೇಟರ್ ಸಲ್ಯೂಶನ್ 5ಎಂಜಿ
ಪಿಲೋಕಾರ್ಪೈನ್ 2ಪರ್ಸೆಂಟ್ ಡ್ರಾಪ್ಸ್
ಸೆಫಡ್ರಾಕ್ಸಿಲ್ ಟ್ಯಾಬ್ಲೆಟ್ 500 ಎಂಜಿ
ಡೆಸ್​ಫೆರಿಆಕ್ಸಮೈನ್ 500 ಎಂಜಿ
ಲಿಥಿಯಮ್ ಟ್ಯಾಬ್ಲೆಟ್ 300ಎಂಜಿ

ಈ ಔಷಧಗಳು ಬಹಳ ಸಾಮಾನ್ಯವಾಗಿ ಬಳಕೆಯಲ್ಲಿವೆ. ಇವುಗಳ ಬೆಲೆಯೂ ಕಡಿಮೆ ಇರುತ್ತವೆ. ಆಸ್ತಮಾ, ತಲಸೆಮಿಯಾ, ಟಿಬಿ, ಮಾನಸಿಕ ಅಸ್ವಸ್ಥತೆ ಇತ್ಯಾದಿ ಆರೋಗ್ಯ ಸಮಸ್ಯೆಗಳಿಗೆ ಈ ಔಷಧಗಳನ್ನು ವೈದ್ಯರು ಶಿಫಾರಸು ಮಾಡುತ್ತಾರೆ. ಬಹಳ ಅಗತ್ಯವಾಗಿರುವ ಔಷಧಗಳೂ ಆಗಿರುವುದರಿಂದ ಬೆಲೆ ಮಿತಿಮೀರಿ ಹೋಗದಂತೆ ನಿಯಮಂತ್ರಿಸಲು ಪ್ರಾಧಿಕಾರವು ಸೀಲಿಂಗ್ ಪ್ರೈಸ್ ನಿಗದಿ ಮಾಡುತ್ತದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!