ಹೊಸದಿಗಂತ ಡಿಜಿಟಲ್ ಡೆಸ್ಕ್:
ಒಡಿಶಾದ ಬಾಲಸೋರ್ ಜಿಲ್ಲೆಯ ಬಹನಾಗಾ ರೈಲು ನಿಲ್ದಾಣದ ಬಳಿ ಹೌರಾದಿಂದ ಚೆನ್ನೈಗೆ ತೆರಳುತ್ತಿದ್ದ ಕೋರಮಂಡಲ್ ಎಕ್ಸ್‌ಪ್ರೆಸ್ ಅಪಘಾತಕ್ಕೀಡಾಗಿದ್ದು, ಮೃತರ ಸಂಖ್ಯೆ 240ಕ್ಕೆ ಏರಿಕೆಯಾಗಿದೆ.
ರಕ್ಷಣಾ ಕಾರ್ಯಾಚರಣೆ ಮುಂದುವರಿದಿದ್ದು, ಮೃತರ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ. ಈ ರೈಲಿನಲ್ಲಿ ಚಿಕ್ಕಮಗಳೂರಿನ ಕಳಸದ 110 ಕನ್ನಡಿಗರು ಪ್ರಯಾಣಿಸುತ್ತಿದ್ದು, 110 ಮಂದಿಯೂ ಸುರಕ್ಷಿತವಾಗಿದ್ದಾರೆ.
ಹೌರಾ ಎಕ್ಸ್‌ಪ್ರೆಸ್‌ಗೆ ಬೆಂಗಳೂರಿನಿಂದ ಪ್ರಯಾಣ ಆರಂಭಿಸಿದ ಎಲ್ಲರೂ ಕಡೆಯ ಬೋಗಿಗಳಲ್ಲಿ ಪ್ರಯಾಣಿಸುತ್ತಿದ್ದರು. ಮಧ್ಯಾಹ್ನ ಇಂಜಿನ್ ಬದಲಾವಣೆಗೆ ರೈಲು ನಿಲ್ಲಿಸಿದಾಗ ಮೂರು ಬೋಗಿಯ ಕನ್ನಡಿಗರ ಮೊದಲ ಬೋಗಿಗೆ ಶಿಫ್ಟ್ ಆಗಿದ್ದಾರೆ. ಅಪಘಾತದಲ್ಲಿ ಮಧ್ಯ ಹಾಗೂ ಕೊನೆಯ ಬೋಗಿಗಳಲ್ಲಿ ಇದ್ದವರಿಗೆ ಹೆಚ್ಚು ಹಾನಿಯಾಗಿದೆ.
ಮೊದಲ ಬೋಗಿಯಲ್ಲಿ ಎಲ್ಲ ಕನ್ನಡಿಗರೂ ಸುರಕ್ಷಿತವಾಗಿದ್ದು, ಮೊದಲ ಬೋಗಿಗೆ ಶಿಫ್ಟ್ ಆದ ಕಾರಣ ಇಂದು ಬದುಕಿದ್ದೇವೆ ಎಂದಿದ್ದಾರೆ.