ಹೊಸದಿಗಂತ ವರದಿ, ಕಲಬುರಗಿ
ಜಿಲ್ಲೆಯ ಜೇವರ್ಗಿ ತಾಲೂಕಿನ ಹೊನ್ನ ಕಿರಣಗಿ ಗ್ರಾಮದಲ್ಲಿ ಶುಕ್ರವಾರ ಮರಗಮ್ಮ ದೇವಿಯ ಮೂರ್ತಿ ಪ್ರತಿಷ್ಠಾಪನೆಯ ಮೆರವಣಿಗೆ ವೇಳೆ ಮದ್ದು ಸಿಡಿದು 12 ಜನರಿಗೆ ಗಾಯವಾಗಿದೆ.
ಗ್ರಾಮದಲ್ಲಿ ಭಗ್ನಗೊಂಡಿರುವ ದೇವಿ ಮೂರ್ತಿಯ ಮರು ಪ್ರತಿಷ್ಠಾಪನೆಗೆ ಗ್ರಾಮಸ್ಥರು
ಮೂರ್ತಿ ಮೆರವಣಿಗೆ ನಡೆಸಿದ್ದರು, ಈ ವೇಳೆ ಗ್ರಾಮದ ಬಸವೇಶ್ವರ ಚೌಕ್ ಬಳಿ ಮದ್ದು ಸಿಡಿಸಿ ಸಂಭ್ರಮಿಸಲು ಮುಂದಾಗಿದ್ದಾಗ, ಮದ್ದು ಸಿಡಿದ್ದು ಅದರ ಕಿಡಿ, ಅಲ್ಲೇ ಶೇಖರಣೆ ಮಾಡಿ ಇಟ್ಟಿದ ಐದು ಕೆಜಿ ಮದ್ದಿನ ಮೇಲೆ ಬಿದ್ದಿದೆ, ಪರಿಣಾಮ ಮದ್ದು ಬ್ಲಾಸ್ಟ್ ಆಗಿ ಹಲವರಿಗೆ ಗಾಯಗಳಾಗಿವೆ ಎಂದು ತಿಳಿದುಬಂದಿದೆ.
ಈ ಘಟನೆಯೂ ಫರಹತಾಬಾದ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.