ಹೊಸದಿಗಂತ ಡಿಜಿಟಲ್ ಡೆಸ್ಕ್ :
ಬಾಂಗ್ಲಾದೇಶದಲ್ಲಿ ಬರೋಬ್ಬರಿ 14 ಹಿಂದೂ ದೇವಾಲಯಗಳ ಮೇಲೆ ದಾಳಿ ನಡೆಸಿ, ವಿಗ್ರಹಗಳನ್ನು ಧ್ವಂಸ ಮಾಡಲಾಗಿದೆ.
ಹಿಂದೂಗಳ ವಿರೋಧಿಗಳು ಕೃತ್ಯ ಎಸಗಿದ್ದು, ಬಾಂಗ್ಲಾದೇಶದ ಹಿಂದೂಗಳು ಜೀವ ಹಾಗೂ ಆಸ್ತಿಯ ಬಗ್ಗೆ ಭಯಭೀತರಾಗಿದ್ದು, ಹಿಂದೂಗಳಿಗೆ ಭದ್ರತೆ ಒದಗಿಸಿ ಎಂದು ಒತ್ತಾಯಿಸಿದ್ದಾರೆ.
ಆರೋಪಿಗಳನ್ನು ಪತ್ತೆಹಚ್ಚಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದು, ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ. ಠಾಕೂರ್ಗಾಂವ್‌ನ ಬಲಿಯಾದಂಗಿಯಲ್ಲಿ ಘಟನೆ ನಡೆದಿದ್ದು, ಕತ್ತಲೆಯ ಲಾಭ ಪಡೆದ ದುಷ್ಕರ್ಮಿಗಳು ದೇವಸ್ಥಾನಗಳ ಮೇಲೆ ದಾಳಿ ನಡೆಸಿದ್ದರು.
ಕೋಲು, ಕಲ್ಲು ಇತರೆ ಆಯುಧಗಳ ಜತೆ ಬಂದು ದೇವಸ್ಥಾನಗಳಿಗೆ ಹಾನಿ ಮಾಡಿ, ವಿಗ್ರಹಗಳನ್ನು ಮುರಿದು ಹೋಗಿದ್ದಾರೆ. ಆರೋಪಿಗಳನ್ನು ಯಾರೂ ನೋಡಿಲ್ಲ, ಕತ್ತಲೆಯ ಕಾರಣ ಯಾರು ಈ ಕೃತ್ಯ ಎಸಗಿದ್ದು ಎಂದು ಸ್ಥಳೀಯರಿಗೆ ತಿಳಿದಿಲ್ಲ.