ತಾಮ್ರದ ಗಣಿ ಪರಿಶೀಲನೆಗೆ ಹೋಗಿ 1,800 ಆಳದಲ್ಲಿ ಸಿಕ್ಕಿಬಿದ್ದ 14 ಅಧಿಕಾರಿಗಳು! ಮುಂದೇನಾಯ್ತು?

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ರಾಜಸ್ಥಾನದ ಜುಂಜುನುದಲ್ಲಿರುವ ಹಿಂದೂಸ್ತಾನ್ ಕಾಪರ್ ಲಿಮಿಟೆಡ್‌ನ ಕೋಲಿಹಾನ್ ಗಣಿಯಲ್ಲಿ ಅಪಘಾತ ಸಂಭವಿಸಿದೆ. ತಾಮ್ರದ ಗಣಿ ಪರಿಶೀಲನೆಗೆ ಹೋಗಿದ್ದ ಅಧಿಕಾರಿಗಳು 1,800 ಆಳದಲ್ಲಿ ಸಿಕ್ಕಿಬಿದ್ದಿದ್ದಾರೆ.

ಲಿಫ್ಟ್​ ಚೈನ್ ತುಂಡಾಗಿ ಗಣಿ ತಪಾಸಣೆಗೆಂದು ಹೋದ ಅಧಿಕಾರಿಗಳು ಗಣಿಯ ಆಳದಲ್ಲಿ ಬರೋಬ್ಬರಿ 12 ತಾಸುಗಳನ್ನು ಜೀವ ಬಿಗಿ ಹಿಡಿದುಕೊಂಡು ಕಾಯುವ ಪರಿಸ್ಥಿತಿ ನಿರ್ಮಾಣವಾಯಿತು. ಮಾಹಿತಿ ಪ್ರಕಾರ 1875 ಅಡಿ ಆಳದಲ್ಲಿ ಲಿಫ್ಟ್ ಚೈನ್ ತುಂಡಾಗಿದೆ. ಬರೋಬ್ಬರಿ 12 ಗಂಟೆಗಳ ಬಳಿಕ ಅಧಿಕಾರಿಗಳನ್ನು ರಕ್ಷಿಸಲಾಯಿತು.

ಗಣಿಯಲ್ಲಿ ಸಿಕ್ಕಿಬಿದ್ದಿರುವ ಅಧಿಕಾರಿಗಳಿಗೆ ಔಷಧಿಗಳು ಮತ್ತು ಆಹಾರದ ಪ್ಯಾಕೆಟ್‌ಗಳನ್ನು ಆಡಳಿತವು ಕಳುಹಿಸಿತ್ತು. ಆಂಬ್ಯುಲೆನ್ಸ್ ಮತ್ತು ವೈದ್ಯರ ತಂಡವನ್ನು ಸಹ ಅಲ್ಲಿ ನಿಯೋಜಿಸಲಾಗಿತ್ತು. ಮಾಹಿತಿ ಪ್ರಕಾರ, ಮೇ 13 ರಿಂದ ಈ ಗಣಿಯಲ್ಲಿ ತಪಾಸಣೆ ಕಾರ್ಯ ನಡೆಯುತ್ತಿತ್ತು. ಈ ಅನುಕ್ರಮದಲ್ಲಿ ಮೇ 14ರ ಸಂಜೆ ಮುಖ್ಯ ವಿಜಿಲೆನ್ಸ್ ಸೇರಿದಂತೆ ಹಲವು ಅಧಿಕಾರಿಗಳು ಗಣಿಗಾರಿಕೆಗೆ ತೆರಳಿ ಪರಿಶೀಲನೆ ನಡೆಸಿದ್ದರು.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!