ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೇರಳದ 14 ವರ್ಷದ ಬಾಲಕ ನಿಫಾ ವೈರಸ್ ಸೋಂಕಿಗೆ ಒಳಗಾಗಿದ್ದು, ಹೃದಯಾಘಾತದಿಂದ ಸಾವನ್ನಪ್ಪಿದ್ದಾನೆ ಎಂದು ಆರೋಗ್ಯ ಸಚಿವೆ ವೀಣಾ ಜಾರ್ಜ್ ಹೇಳಿದ್ದಾರೆ.
ಇಂದು ಬೆಳಗ್ಗೆ ಕೋಳಿಕ್ಕೋಡ್ನ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಬಾಲಕ ಕೊನೆಯುಸಿರೆಳೆದಿದ್ದಾನೆ ಎಂದು ತಿಳಿಸಿದ್ದಾರೆ. ನಿನ್ನೆ, ಶನಿವಾರ, ಮಲಪ್ಪುರಂ ಜಿಲ್ಲೆಯ ಪಾಂಡಿಕ್ಕಾಡ್ ನಿವಾಸಿಯಾದ ಬಾಲಕನಿಗೆ ನಿಫಾ ವೈರಸ್ ಸೋಂಕು ದೃಢಪಟ್ಟಿತ್ತು.
ಬಾಲಕ ವೆಂಟಿಲೇಟರ್‌ನಲ್ಲಿದ್ದ. ಇಂದು ಬೆಳಗ್ಗೆ ಅವರಿಗೆ ಮೂತ್ರದ ಪ್ರಮಾಣ ಕಡಿಮೆಯಾಗಿತ್ತು. ಬೆಳಗ್ಗೆ 10.50ಕ್ಕೆ ತೀವ್ರ ಹೃದಯ ಸ್ತಂಭನವಾಗಿತ್ತು. ಆ ಬಳಿಕ ಪುನಶ್ಚೇತನಗೊಳಿಸಲು ಮಾಡಿದ ಪ್ರಯತ್ನಗಳು ವಿಫಲವಾದವು. ಬೆಳಗ್ಗೆ 11:30ಕ್ಕೆ ಮೃತಪಟ್ಟ, ಮೃತರ ಅಂತ್ಯಕ್ರಿಯೆ ಅಂತಾರಾಷ್ಟ್ರೀಯ ನಿಯಮಾವಳಿಗಳ ಪ್ರಕಾರ ನಡೆಯಲಿದೆ ಎಂದು ವರದಿ ಮಾಡಿದೆ.