26/11 ಮುಂಬೈ ದಾಳಿಗೆ 14 ವರ್ಷ: ಹುತಾತ್ಮರಿಗೆ ಭಾವಪೂರ್ಣ ಶ್ರದ್ಧಾಂಜಲಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

2008 ನವೆಂಬರ್ 26 ಮುಂಬೈ ನಗರದ ಮೇಲೆ ಭೀಕರ ದಾಳಿ ನಡೆದಿತ್ತು. ಯಾರೂ ಮರೆಯದ ಮುಂಬೈ ದಾಳಿ ನಡೆದು ಇಂದಿಗೆ 14  ವರ್ಷ. ಪಾಕಿಸ್ತಾನದ ಲಷ್ಕರ್-ಇ-ತೊಯ್ಬಾ ಉಗ್ರ ಸಂಘಟನೆಯ ಭಯೋತ್ಪಾದಕರು ನಡೆಸಿದ ದಾಳಿಗೆ ಮುಂಬೈ ತತ್ತರಿಸಿತ್ತು.

ಉಗ್ರ ಸಂಘಟನೆಯ 10 ಉಗ್ರರು ಜನನಿಬಿಡ ಪ್ರದೇಶಗಳಲ್ಲಿ ಜನರ ಮಾರಣಹೋಮ ನಡೆಸಿದ್ದರು. ಉಗ್ರದಾಳಿ ಘಟನೆಯಲ್ಲಿ ಮಡಿದವರನ್ನು ಜನ ಸ್ಮರಿಸಿದ್ದು, ಹುತಾತ್ಮರಿಗೆ ಗೌರವ ಸಲ್ಲಿಸಲಾಗುತ್ತಿದೆ. ಗೇಟ್‌ವೇ ಆಫ್ ಇಂಡಿಯಾ ಮತ್ತು ತಾಜ್ ಹೋಟೆಲ್ ಹೊರತೆ ಜನರು ಗೌರವ ಸಲ್ಲಿಸಿದರು, ಉಪಮುಖ್ಯಮಂತ್ರ ದೇವೇಂದ್ರ ಫಡ್ನವಿಸಿ ಅವರು ಜನರ ಜೊತೆ ಸೇರಿ ಗೌರವ ಸಲ್ಲಿಸಿದರು.

ತಾಜ್, ಒಬೆರಾಯ್ ಹೊಟೇಲ್‌ಗಳು ಉಗ್ರರ ದಾಳಿಗೆ ಗುರಿಯಾಗಿದ್ದವು. ಹೊಟೇಲ್‌ಗಳಲ್ಲಿದ್ದ ಜನರು ರಕ್ಷಣಗಾಗಿ ಕಣ್ಣೀರಿಟ್ಟರು. ಅವರನ್ನು ರಕ್ಷಿಸಲು ಹೋದ ಪೊಲೀಸ್ ಅಧಿಕಾರಿಗಳಾದ ಹೇಮಂತ್ ಕರ್ಕರೆ, ಸಂದೀಪ್ ಉನ್ನಿಕೃಷ್ಣನ್, ಅಶೋಕ್ ಕಾಮ್ಟೆ, ವಿಜಯ್ ಸಾಲಸ್ಕರ್, ತುಕಾರಾಮ್ ಓಂಬ್ಳೆ ಹತರಾದರು. ಉಗ್ರ ಹಾರಿಸಿದ ಗುಂಡು ಎದೆ ಸೀಳಿದರೂ ಬಿಡದೆ ಶೌರ್ಯತೋರಿದ ತುಕಾರಾಮ್ ಕೊನೆಯುಸಿರೆಳೆಯುವ ಮುನ್ನ ಉಗ್ರ ಕಸಬ್‌ನ ಮೇಲೆ ಗುಂಡು ಹಾರಿಸಿ ಆತನನ್ನು ಸೆರೆಹಿಡಿಯುವಂತೆ ಮಾಡಿದರು.

ಸಮುದ್ರ ಮಾರ್ಗದಿಂದ ಬಂದ ಲಷ್ಕರ್ ಉಗ್ರ ಸಂಘಟನೆಯ 10 ಉಗ್ರರು ಸತತ ಮೂರು ದಿನ ಮುಂಬೈಯನ್ನು ತನ್ನ ಕಪಿಮುಷ್ಟಿಯಲ್ಲಿ ಇಟ್ಟುಕೊಂಡಿದ್ದರು. ಬಾಂಬ್ ಹಾಗೂ ಗುಂಡಿನ ದಾಳಿ ನಡೆಸಿ 166 ಮಂದಿಯ ಪ್ರಾಣ ತೆಗೆದಿದ್ದರು. 300 ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು. ಭಾರತದ ಈ ಕರಾಳ ಅಧ್ಯಾಯಕ್ಕೆ ಇಂದು 14 ವರ್ಷ. ಎಷ್ಟೇ ವರ್ಷಗಳು ಕಳೆದರೂ ಕರಾಳ ವರ್ಷದ ನೆನಪುಗಳು ಮಾತ್ರ ಮಾಸಿಲ್ಲ. ಮಾಸುವುದೂ ಇಲ್ಲ!

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!