ಹೊಸದಿಗಂತ ಡಿಜಿಟಲ್ ಡೆಸ್ಕ್:
ಪ್ರವಾಹ ಹಾಗೂ ಭೂ ಕುಸಿತದಿಂದ ತತ್ತರಿಸಿರುವ ಹಿಮಾಚಲ ಪ್ರದೇಶಕ್ಕೆ ಕರ್ನಾಟಕ ಆರ್ಥಿಕ ನೆರವು ನೀಡಿದೆ
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆದೇಶದಂತೆ 15 ಕೋಟಿ ರೂಪಾಯಿಯನ್ನು ಹಣಕಾಸು ಇಲಾಖೆ ಹಣ ಬಿಡುಗಡೆ ಮಾಡಿದೆ.
ಈ ಕುರಿತು ಟ್ವೀಟ್ ಮಾಡಿರುವ ಮುಖ್ಯಮಂತ್ರಿ, ಸಂಕಷ್ಟದ ಸಮಯದಲ್ಲಿ ನಮ್ಮ ಸಹೋದರ ಸಹೋದರಿಯರೊಂದಿಗೆ ನಿಲ್ಲುವುದು ಮುಖ್ಯವಾಗಿದೆ. ಕರ್ನಾಟಕದ ಜನರು ಹಿಮಾಚಲ ಪ್ರದೇಶದ ಜನರ ಯೋಗಕ್ಷೇಮಕ್ಕಾಗಿ ಪ್ರಾರ್ಥಿಸುತ್ತಾರೆ ಎಂದು ಹೇಳಿದ್ದಾರೆ.
Chief Minister Shri @siddaramaiah has extended support to flood hit Himachal Pradesh by ordering to release funds of Rs 15 crores for relief measures.
It is important to stand with our brothers and sisters during distressing times. People of Karnataka pray for the well being of… pic.twitter.com/AHjO57tK58
— CM of Karnataka (@CMofKarnataka) August 21, 2023
ಛತ್ತೀಸ್ ಗಢ ಸರ್ಕಾರ ಕೂಡಾ ಹಿಮಾಚಲ ಪ್ರದೇಶಕ್ಕೆ ನೆರವು ನೀಡಿದ್ದು, ವಿಪತ್ತು ಸಂತ್ರಸ್ತರ ಪರಿಹಾರ ಮತ್ತು ಪುನವರ್ಸತಿಗಾಗಿ ಛತ್ತೀಸ್ ಗಢ ಮುಖ್ಯಮಂತ್ರಿ ಭೂಪೇಶ್ ಬಘೇಲ್ ಅವರು 11 ಕೋಟಿ ರೂಪಾಯಿ ಆರ್ಥಿಕ ನೆರವು ನೀಡಿದ್ದಾರೆ. ಅದೇ ರೀತಿ ರಾಜಸ್ಥಾನ ಸರ್ಕಾರ ಕೂಡಾ 15 ಕೋಟಿ ರೂ. ಆರ್ಥಿಕ ನೆರವನ್ನು ಹಿಮಾಚಲ ಪ್ರದೇಶಕ್ಕೆ ನೀಡಿದೆ.