ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೋಲ್ಕತಾ ಹತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತ್ರಸ್ಥೆಯ ಮರಣೋತ್ತರ ವರದಿ ನೀಡಿದ್ದ ವೈದ್ಯರು ಇಂದು ಸ್ಪಷ್ಟನೆಯೊಂದನ್ನು ನೀಡಿದ್ದು, ಆಕೆಯ ದೇಹದಲ್ಲಿ ಪತ್ತೆಯಾಗಿದ್ದು 150 ಗ್ರಾಂ ವೀರ್ಯವಲ್ಲ, ಅದು ಗರ್ಭಾಶಯದ ತೂಕ ಎಂದು ಹೇಳಿದ್ದಾರೆ.
ಪಶ್ಚಿಮ ಬಂಗಾಳದ ಕೋಲ್ಕತಾ ಆರ್‌ಜಿ ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಕ್ರೂರವಾಗಿ ಕೊಲೆಗೀಡಾದ ಟ್ರೈನಿ ವೈದ್ಯೆಯ ದೇಹದ ಮೇಲೆ 150 ಗ್ರಾಂ ವೀರ್ಯ ಕಂಡು ಬಂದಿದೆ ಎನ್ನುವ ಸುದ್ದಿಯನ್ನು ವೈದ್ಯರೊಬ್ಬರು ನಿರಾಕರಿಸಿದ್ದಾರೆ. ಮರಣೋತ್ತರ ವರದಿಯಲ್ಲಿ ಉಲ್ಲೇಖಿಸಲಾದ 150 ಗ್ರಾಂ ಎನ್ನುವುದು ಗರ್ಭಾಶಯದ ತೂಕವೇ ಹೊರತು ಯಾವುದೇ ದ್ರವದ ತೂಕವಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಮೃತ ವೈದ್ಯೆಯ ಶರೀರದಲ್ಲಿ 150 ಗ್ರಾಂ ವೀರ್ಯ ಪತ್ತೆಯಾಗಿದೆ ಎಂದು ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ತಿಳಿಸಲಾಗಿದೆ ಎನ್ನುವ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದು, ಈ ಹಿನ್ನೆಲೆಯಲ್ಲಿ ವೈದ್ಯರು ಸ್ಪಷ್ಟನೆ ನೀಡಿದ್ದಾರೆ.