ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೋಗಿಲು ಲೇಔಟ್‌ನಲ್ಲಿದ್ದ 161 ಮನೆ ನೆಲಸಮ ಆಗಿದೆ. ದಾಖಲಾತಿ ಪರಿಶೀಲನೆ ಆಗುತ್ತಿದೆ. 26 ಜನರಿಗೆ ಮನೆ ಕೊಡಬಹುದು ಎಂದು ಸಚಿವ ಜಮೀರ್ ಅಹ್ಮದ್ ಹೇಳಿದ್ದಾರೆ.
ಕೋಗಿಲು ಲೇಔಟ್‌ನಲ್ಲಿ ನಿರಾಶ್ರಿತರಿಗೆ ಗೃಹ ಭಾಗ್ಯ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿ, ಎಲ್ಲರ ದಾಖಲೆ ನೋಡಬೇಕು. ದಾಖಲಾತಿ ಪರಿಶೀಲನೆ ಆಗುತ್ತಿದೆ. ಕಂಡೀಷನ್ ಹಾಕಿ ಮನೆ ಕೊಡುತ್ತೇವೆ. ವಲಸಿಗರಿಗೆ ಯಾವ ಕಾರಣಕ್ಕೂ ಕೊಡಲ್ಲ. ಸ್ಥಳೀಯರು ಆಗಿರಬೇಕು, ಅವರಿಗೆ ಮಾತ್ರ ಮನೆ ಎಂದರು.
ಇದನ್ನೂ ಓದಿ: ಕಬ್ಬಿನ ಗದ್ದೆಯಲ್ಲಿ ಸುಟ್ಟ ಸ್ಥಿತಿಯಲ್ಲಿ ಮಹಿಳೆಯ ಶವ ಪತ್ತೆ! ಲೈಂಗಿಕ ದೌರ್ಜನ್ಯ ನಡೆಸಿ ಕೊಲೆ ಶಂಕೆ
ಕ್ಯಾಬಿನೆಟ್‌ನಲ್ಲಿ ಯಾವುದೇ ಚರ್ಚೆ ಮಾಡಲ್ಲ, ಸಿಎಂ ಈಗಾಗಲೇ ಮೀಟಿಂಗ್ ಮಾಡಿ ಸೂಚನೆ ಕೊಟ್ಟಿದ್ದಾರೆ. 26 ಜನರ ದಾಖಲೆಗಳು ಕ್ಲಿಯರ್ ಆಗಿದೆಯಂತೆ. ಅವರಿಗೆ ಇವತ್ತು ಮನೆ ಕೊಡಬಹುದು ಎಂದು ತಿಳಿಸಿದರು.

