18 RCBಗೆ ಅದೃಷ್ಟದ ಸಂಖ್ಯೆ? 18 ಅಂದ್ರೆ ಕೊಹ್ಲಿಗೆ ಇಷ್ಟಾನ? 18ಕ್ಕೆ ಮ್ಯಾಚ್ ಗೆಲ್ತಾರಾ? ಏನಿದು ನಂ. ಗೇಮ್!!

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಾಯಲ್ ಚಾಲೆಂಜರ್ಸ್ ಬೆಂಗಳೂರು ಅಭಿಮಾನಿಗಳಿಗೆ ಇರೋದೇ ಒಂದೇ ಒಂದು ಕನಸು. ಪ್ಲೇಆಫ್ ಹಂತಕ್ಕೆ ಬಂದರೆ ಈ ಬಾರಿ ಟ್ರೋಫಿ ನಮ್ಮದಾಗಲಿದೆ ಎಂದು. ಎಲ್ಲರ ಕಣ್ಣು ಮುಂದಿನ ತಂಡದ ಮೇಲಿದೆ. ಆರ್‌ಸಿಬಿ ಆಟಗಾರರು ಚೆನ್ನೈ ವಿರುದ್ಧ ಸಮರ ಸಾರಲು ಸಿದ್ಧರಾಗಿದ್ದಾರೆ.

ದೆಹಲಿ ವಿರುದ್ಧದ ಗೆಲುವಿನ ನಂತರ ಆರ್‌ಸಿಬಿ ಚೆನ್ನೈ ವಿರುದ್ಧ ಗೆಲ್ಲುವ ಕನಸನ್ನು ಮುಂದುವರಿಸಿದೆ. ಅಂತೆಯೇ ಮೇ 18 ರಂದು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರ್‌ಸಿಬಿ ಮತ್ತು ಚೆನ್ನೈ ತಂಡಗಳು ಮುಖಾಮುಖಿಯಾಗಲಿವೆ.

ಇದನ್ನು ನಂಬಿ ಅಥವಾ ಬಿಡಿ, 18ರಲ್ಲಿ ಆಡಿರುವ ಪಂದ್ಯವನ್ನು RCB ಗೆದ್ದಿದೆ. ಇದಲ್ಲದೆ, ಇತಿಹಾಸವು ಇದನ್ನು ಪದೇ ಪದೇ ನಮಗೆ ನೆನಪಿಸುತ್ತದೆ. ನಿಮ್ಮ ಮಾಹಿತಿಗಾಗಿ, ವಿರಾಟ್ ಕೊಹ್ಲಿ ಅವರ ಜೆರ್ಸಿ ಸಂಖ್ಯೆ 18 ಎಂಬುದು ಎಲ್ಲರಿಗೂ ತಿಳಿದಿದೆ. ಆದರೆ ಅದರ ಜೊತೆಗೆ ಮೇ18ರಂದು ಆರ್​​​ಸಿಬಿ ಆಡಿದ ಯಾವ ಪಂದ್ಯವನ್ನು ಕಳೆದುಕೊಂಡಿಲ್ಲ.

ಮೊದಲ ಬಾರಿಗೆ ಮೇ18ರಂದು ಸಿಎಸ್​ಕೆ ವಿರುದ್ಧ ಆಡಿದ್ದರು. ಎರಡನೇ ಬಾರಿಗೂ ಚೆನ್ನೈ ತಂಡವೇ ಆರ್​ಸಿಬಿಗೆ ಎದುರಾಳಿಯಾಗಿ ಸಿಕ್ಕಿತ್ತು. ಎರಡು ಬಾರಿಯೂ ಆರ್​ಸಿಬಿ ಗೆದ್ದಿತ್ತು. 3ನೇ ಬಾರಿಗೆ ಪಂಜಾಬ್​ ಜೊತೆ ಗೆದ್ದು ಬೀಗಿತ್ತು. ಕಳೆದ ವರ್ಷ ಕೂಡ ಮೇ18ರಂದು ಹೈದರಾಬಾದ್​ ತಂಡ ಎದುರಾಗಿತ್ತು. ಆ ಪಂದ್ಯದಲ್ಲಿ ಆರ್​ಸಿಬಿ ತಂಡ ಜಯ ಸಾಧಿಸಿತ್ತು.

ಮುಂದಿನ ವಾರ ಬೆಂಗಳೂರಿನಾದ್ಯಂತ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಆದರೆ, ಆರ್‌ಸಿಬಿ ಮತ್ತು ಚೆನ್ನೈ ನಡುವಿನ ಪಂದ್ಯ ಶನಿವಾರ ನಡೆಯಲಿದೆ. ಆದರೆ, ಅಭಿಮಾನಿಗಳು ಮಳೆ ಯಾವುದೇ ಕಾರಣಕ್ಕೂ ಬರಬಾರದೆಂದು ಬೇಡಿಕೊಳ್ಳುತ್ತಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!