ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಂಗಳೂರು ಟೆಕ್ಕಿ ಖಾತೆಯಲ್ಲಿದ್ದ 2.80 ಕೋಟಿ ರೂಪಾಯಿಯನ್ನು ಸೈಬರ್ ಖದೀಮರು ವಂಚಿಸಿರುವ ಪ್ರಕರಣ ಬೆಳಕಿಗೆ ಬಂದಿದೆ.
ಸಿಮ್ ಖರೀದಿ ವೇಳೆ ಟೆಕ್ಕಿಗೆ ಗಿಫ್ಟ್ ಎಂದು ಹೊಸ ಮೊಬೈಲ್ ಕಳುಹಿಸಲಾಗಿತ್ತು. ಇದನ್ನೇ ನಂಬಿ ಹೊಸ ಮೊಬೈಲ್ ಗೆ ಸಿಮ್ ಕಾರ್ಡ್ ಹಾಕಿದ್ದರು. ಆ ಮೊಬೈಲ್ ಗೆ ಕೆಲವು ಅಪ್ಲಿಕೇಶನ್ ಇನ್ಸಾಲ್ ಮಾಡಿದ್ದ ಸೈಬರ್ ವಂಚಕರು ಮೊಬೈಲ್ ಗೆ ಬರುವ ಒಟಿಪಿ ಅವರಿಗೂ ಸಿಗುವಂತೆ ಸೆಟ್ ಮಾಡಿಕೊಂಡಿದ್ದರು ಎನ್ನಲಾಗಿದೆ. ಎಫ್.ಡಿ.ಯಲ್ಲಿಟ್ಟಿದ್ದ 2.80 ಕೋಟಿ. ರೂ.ಗಳನ್ನು ಸೈಬರ್ ಖದೀಮರು ವಂಚಿಸಿದ್ದಾರೆ ಎಂದು ತಿಳಿದು ಬಂದಿದೆ.
ಈ ಸಂಬಂಧ ವೈಟ್ ಫೀಲ್ಡ್ ಸಿಇಎನ್ ಠಾಣೆಗೆ ವಂಚನೆಗೊಳಗಾದ ಟೆಕ್ಕಿ ದೂರು ದಾಖಲಿಸಿದ್ದಾರೆ.