ಹೊಸದಿಗಂತ ಡಿಜಿಟಲ್ ಡೆಸ್ಕ್:
ಯುಎಸ್ ಟೆಕ್ ದೈತ್ಯ ಮೆಟಾ ಪ್ಲಾಟ್ಫಾರ್ಮ್ ವಾಟ್ಸಾಪ್ ( WhatsApp ) ಎರಡು ಗಂಟೆ ಕಾಲ ಸ್ಥಗಿತಗೊಂಡಿತ್ತು. ಇದರಿಂದ ಕೋಟ್ಯಂತರ ಬಳಕೆದಾರರು ಸಂದೇಶಗಳನ್ನು ಕಳುಹಿಸಲು ಪರದಾಡಿದ್ದಾರೆ.
ಇದೀಗ ಬಳಕೆದಾರರ ಬಳಿ ಮೆಟಾ ಕ್ಷಮೆಯಾಚಿಸಿದ್ದು, ‘ಜನರು ಇಂದು ವಾಟ್ಸಾಪ್ನಲ್ಲಿ ಸಂದೇಶಗಳನ್ನು ಕಳುಹಿಸಲು ತೊಂದರೆ ಅನುಭವಿಸುತ್ತಿದ್ದಾರೆ ಎಂದು ನಮಗೆ ತಿಳಿದಿದೆ. ನಾವು ಸಮಸ್ಯೆಯನ್ನು ಸರಿಪಡಿಸಿದ್ದೇವೆ. ಯಾವುದೇ ಅನಾನುಕೂಲತೆಗಾಗಿ ಕ್ಷಮೆಯಾಚಿಸುತ್ತೇವೆ’ ಎಂದು ಮೆಟಾ ವಕ್ತಾರರು ಎಎಫ್ಪಿಗೆ ತಿಳಿಸಿದರು.
ಸ್ವಲ್ಪ ಸಮಯದ ಸ್ಥಗಿತದ ನಂತರ ಮರುಸ್ಥಾಪಿಸಲಾಗಿದೆ ಎಂದು ವಾಟ್ಸಾಪ್ ಹೇಳಿದೆ. ಇದಕ್ಕೂ ಮುನ್ನಾ ವಿಶ್ವದಾದ್ಯಂತದ ಜನರು ಸಂದೇಶಗಳನ್ನು ಕಳುಹಿಸಲು ಅಥವಾ ಸ್ವೀಕರಿಸಲು ಸಾಧ್ಯವಿಲ್ಲ ಎಂದು ದೂರಿದ್ದರು.