ಹೊಸದಿಗಂತ ಡಿಜಿಟಲ್ ಡೆಸ್ಕ್:
ಹುಣಸೂರು ತಾಲೂಕು ತಿಪ್ಪಾರಾಪುರ ಗ್ರಾಮದಲ್ಲಿ ಸಾಲಬಾಧೆಯಿಂದ ರೈತ ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣ ಬೆಳಕಿಗೆ ಬಂದಿದೆ. ಕರಿಗೌಡ (53) ಆತ್ಮಹತ್ಯೆಗೆ ಶರಣಾದ ರೈತ.
ಕರಿಗೌಡ ಎಂಬ ರೈತ ಕ್ರಿಮಿನಾಶಕ ಧಾನ್ಯಗಳನ್ನು ತಿಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. 2.5 ಹೆಕ್ಟೇರ್ ಭೂಮಿ ಹೊಂದಿದ್ದ ರೈತ, ತಂಬಾಕು ಮತ್ತು ಇತರ ಬೆಳೆಗಳನ್ನು ಬೆಳೆಯುತ್ತಿದ್ದರು. ಕರಿಗೌಡ ಅವರು ಕರ್ಣಾಟಕ ಬ್ಯಾಂಕ್‌ನಿಂದ 2 ಲಕ್ಷ ಮತ್ತು ಗ್ರಾಮದಲ್ಲಿ 2 ಲಕ್ಷದಷ್ಟು ಸಾಲ ಪಡೆದಿದ್ದರು. ಬೆಳೆಗಳನ್ನು ಕಟಾವು ಮಾಡಲು ಸಾಧ್ಯವಾಗದೆ, ಸಾಲವನ್ನು ಪಾವತಿಸಲು ಸಾಧ್ಯವಾಗದೆ, ಕ್ರಿಮಿನಾಶಕ ಔಷಧವನ್ನು ಸೇವಿಸಿ ಅಸ್ಪಸ್ಥ ಆಗಿದ್ದರು.
ತಕ್ಷಣ ಅವರನ್ನು ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಕರಿಗೌಡ ಮೃತಪಟ್ಟಿದ್ದಾರೆ. ಸದ್ಯ ಹುಣಸೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.