ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಷ್ಟ್ರ ರಾಜಧಾನಿ ದೆಹಲಿಯ ಕೆಂಪುಕೋಟೆ ಬಳಿ ಕಾರ್ ಬ್ಲಾಸ್ ಪ್ರಕರಣದ ತನಿಖೆ ತೀವ್ರಗೊಂಡಿದೆ. ಸ್ಫೋಟದ ಸ್ಥಳ ಪರಿಶೀಲನೆ ವೇಳೆ 2 ಜೀವಂತ ಕಾಟ್ರಿಡ್ಜ್ ಅನ್ನು ಎಫ್‌ಎಸ್‌ಎಲ್ (FSL) ತಂಡ ವಶಕ್ಕೆ ಪಡೆದಿದೆ.
ಪ್ರಕರಣ ಸಂಬಂಧ ಸ್ಥಳ ಪರಿಶೀಲನೆ ವೇಳೆ ಎರಡು ವಿಭಿನ್ನ ರೀತಿಯ ಸ್ಫೋಟಕಗಳ ಮಾದರಿಗಳನ್ನು ಸಂಗ್ರಹಿಸಲಾಗಿದೆ. ಒಂದು ಅಮೋನಿಯಂ ನೈಟ್ರೇಟ್‌ಗೆ ಹೋಲುವ ಸ್ಫೋಟಕ ಸಂಗ್ರಹವಾಗಿದ್ದರೆ, ಇನ್ನೊಂದು ಸ್ಫೋಟಕ ಅಮೋನಿಯಂ ನೈಟ್ರೇಟ್‌ಗಿಂತ ಪ್ರಬಲವಾಗಿದೆ ಎಂಬುದು ತಿಳಿದುಬಂದಿದೆ.
ಸ್ಫೋಟದ ಸ್ಥಳದಿಂದ ಒಟ್ಟು 42 ಸ್ಯಾಂಪಲ್‌ಗಳನ್ನು ಸಂಗ್ರಹಿಸಲಾಗಿದ್ದು, ಅದರಲ್ಲಿ 20 ವಸ್ತುಗಳು ವಾಹನಗಳ ಭಾಗಗಳಾಗಿವೆ. ಇದರಲ್ಲಿ ಟೈರ್‌ಗಳು, ಚಾಸಿಸ್, ಸಿಎನ್‌ಜಿ ಸಿಲಿಂಡರ್ ಮತ್ತು ಬಾನೆಟ್‌ನ ಭಾಗಗಳು ಸೇರಿವೆ. ಇಂದು ಎಲ್ಲಾ ವಸ್ತುಗಳ ಮಾದರಿ ಬಗ್ಗೆ ವಿಶ್ಲೇಷಣಾ ಕಾರ್ಯ ಶುರುವಾಗಲಿದೆ.
Delhi Blast | 2 ಜೀವಂತ ಕಾಟ್ರಿಡ್ಜ್ ವಶಪಡಿಸಿಕೊಂಡ FSL

