September 30, 2026
Wednesday, September 30, 2026
spot_img

ಕೈಗಾರಿಕಾ ಅನಿಲ ಬಳಕೆ ಶೇ. 50 ರಷ್ಟು ಕಡಿತಗೊಳಿಸಿದ ಗುಜರಾತ್ ಸರಕಾರ!

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಜಗತ್ತಿನಾದ್ಯಂತ ತೈಲ ಮತ್ತು ಅನಿಲ ಬಿಕ್ಕಟ್ಟು ಪರಿಸ್ಥಿತಿ ಉದ್ಭವವಾಗಿದೆ. ಭಾರತಕ್ಕೂ ಇದರ ಬಿಸಿ ತಟ್ಟಿದೆ. ಇತ್ತ ಗುಜರಾತ್ ಸರ್ಕಾರವು ಅನಿಲದ ಕೈಗಾರಿಕಾ ಬಳಕೆಯ ಮೇಲೆ ಶೇ. 50 ರಷ್ಟು ಕಡಿತವನ್ನು ವಿಧಿಸಿದೆ .

ಈ ಕುರಿತು ಮಾತನಾಡಿದ ಗುಜರಾತ್ ಇಂಧನ ಸಚಿವ ಋಷಿಕೇಶ್ ಪಟೇಲ್ ಅವರು , ಮನೆಗಳು, ಅಡುಗೆ ಅನಿಲ ಸಿಲಿಂಡರ್‌ಗಳ ಕೊರತೆಯನ್ನು ಎದುರಿಸದಂತೆ ನೋಡಿಕೊಳ್ಳಲು ರಾಜ್ಯ ಮತ್ತು ಕೇಂದ್ರ ಸರ್ಕಾರ ನಿಕಟವಾಗಿ ಸಮನ್ವಯ ಸಾಧಿಸುತ್ತಿವೆ ಎಂದು ತಿಳಿಸಿದ್ದಾರೆ.

ಮನೆ ಬಳಕೆಗೆ ಎಲ್ ಪಿಜಿಗೆ ಆದ್ಯತೆ ನೀಡಲು ಕೆಲವು ಕೈಗಾರಿಕಾ ಬಳಕೆಯ ಅನಿಲದ ಮೇಲೆ ನಿರ್ಬಂಧಗಳನ್ನು ವಿಧಿಸಲಾಗಿದೆ. ಕೈಗಾರಿಕೆಗಳಿಗೆ ಅನಿಲ ಪೂರೈಕೆಯಲ್ಲಿ ಶೇ. 50 ರಷ್ಟು ಕಡಿತವನ್ನು ವಿಧಿಸಿದ್ದೇವೆ. ರಸಗೊಬ್ಬರ ಮತ್ತು ಹಾಲಿ(ಸಂಸ್ಕರಣೆ) ಗಾಗಿ, ಅನಿಲ ಪೂರೈಕೆಯಲ್ಲಿ ಸುಮಾರು ಶೇ. 40 ರಷ್ಟು ಕಡಿತವಿದೆ ಎಂದು ತಿಳಿಸಿದರು.

Must Read