ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೇರಳದ 2 ಸಾವಿರ ಪಡಿತರ ಅಂಗಡಿಗಳು ಇನ್ನು ಕೆ ಸ್ಟೋರ್‌ಗಳಾಗಿ ಮೇಲ್ದರ್ಜೆಗೇರಲಿವೆ.
ಮೊದಲ ಹಂತದಲ್ಲಿ 1265 ಅಂಗಡಿಗಳನ್ನು ಕೆ ಸ್ಟೋರ್‌ಗಳಾಗಿಸಲಿದ್ದು, ಈ ಪೈಕಿ ಶೇ.10ರಷ್ಟು ಇದೇ ಮಾರ್ಚ್ ತಿಂಗಳೊಳಗೆ ಪೂರ್ನಗೊಳಿಸುವ ಗುರಿಯನ್ನು ಸರ್ಕಾರ ಹೊಂದಿದೆ.
ಈ ಬಗ್ಗೆ ಮಾಹಿತಿ ನೀಡಿರುವ ಕೇರಳ ಆಹಾರ ಸಚಿವ ಜಿ ಆರ್ ಅನಿಲ್, ಕಳೆದ ಏಳು ತಿಂಗಳಲ್ಲಿ ಕೆ ಸ್ಟೋರ್ ಆಗಿ ಮೇಲ್ದರ್ಜೆಗೇರಿದ 66 ಮಳಿಗೆಗಳಿಂದ 1,45,32,652 ರೂ.ಗಳ ಆದಾಯ ಬಂದಿದೆ. ಪಡಿತರ ಅಂಗಡಿಗಳಿಂದ ಲಭ್ಯವಿರುವ ಸೇವೆಗಳ ಹೊರತಾಗಿ, ಕೈಗಾರಿಕಾ ಇಲಾಖೆ, ಕೃಷಿ ಇಲಾಖೆಯ ಮೌಲ್ಯವರ್ಧಿತ ಉತ್ಪನ್ನಗಳು, ಮಿಲ್ಮಾ ಉತ್ಪನ್ನಗಳು ಈ ಸ್ಟೋರ್‌ಗಳಲ್ಲಿ ಲಭ್ಯವಿರಲಿದೆ ಎಂದು ಅವರು ಹೇಳಿದ್ದಾರೆ.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ