October 9, 2026
Friday, October 9, 2026
spot_img

20 ಶಾಲೆಗಳ ನವೀಕರಣಕ್ಕೆ ಸಹಾಯ ಮಾಡ್ತೀವಿ: ಇದು ನಮ್ಮ ‘ಸೇವಾ ಸಂಕಲ್ಪ ಅಭಿಯಾನ’ ಎಂದ ರಾಲಿಯಾ ದಂಪತಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ನಿನ್ನೆ ಪ್ರಧಾನಿ ಮೋದಿ ತಮ್ಮ 76ನೇ ಜನ್ಮದಿನವನ್ನು ಆಚರಿಸಿಕೊಂಡಿದ್ದಾರೆ. ಪ್ರಧಾನಿಯ ಜನ್ಮದಿನಕ್ಕೆ ಬಿಜೆಪಿ ಸೇವಾ ಸಂಕಲ್ಪ ಅಭಿಯಾನವನ್ನು ಆರಂಭಿಸಿದೆ. ಈ ಅಭಿಯಾನ ಒಂದು ತಿಂಗಳು ನಡೆಯಲಿದ್ದು, ಸೇವೆ, ಜನರಿಗೆ ಉಪಕಾರವಾಗುವಂತ ಕೆಲಸಗಳನ್ನು ಮಾಡಲಾಗುತ್ತದೆ.

ಈ ಅಭಿಯಾನಕ್ಕೆ ಬಾಲಿವುಡ್‌ ನಟ ರಣ್‌ಬೀರ್‌ ಕಪೂರ್‌ ಕೈ ಜೋಡಿಸಿದ್ದಾರೆ. ಮೋದಿಜಿಯ ಜನ್ಮದಿನದ ಸ್ಮರಣಾರ್ಥ ಮುಂಬೈನಲ್ಲಿರುವ 20 ಶಾಲೆಗಳನ್ನು ದತ್ತು ತೆಗೆದುಕೊಳ್ಳುತ್ತೇವೆ. ಈ ಶಾಲೆಗಳ ನವೀಕರಣ ಮಾಡಿ ಮಕ್ಕಳ ಉತ್ತಮ ಶಿಕ್ಷಣಕ್ಕೆ ನೆರವಾಗುತ್ತೇವೆ ಎಂದು ಹೇಳಿದ್ದಾರೆ.

ಈ ಬಗ್ಗೆ ಆಲಿಯಾ ಭಟ್‌ ತಮ್ಮ ಸಾಮಾಜಿಕ ಜಾಲತಾಣದ ಖಾತೆಯಿಂದ ಪೋಸ್ಟ್‌ ಮಾಡಿದ್ದು, ಮುಂಬೈನಲ್ಲಿರುವ 20 ಬಿಎಂಸಿ ಶಾಲೆಗಳಿಗೆ ಅಗತ್ಯ ಮೂಲ ಸೌಕರ್ಯ ಒದಗಿಸುತ್ತೇವೆ. ನಮ್ಮ ಗೌರವಾನ್ವಿತ ಪ್ರಧಾನ ಮಂತ್ರಿಗಳ ಜನ್ಮದಿನದ ಅಂಗವಾಗಿ ಆಯೋಜಿಸಿರುವ ಸೇವಾ ಸಂಕಲ್ಪ ಅಭಿಯಾನಕ್ಕೆ ನಮ್ಮ ಕೈಲಾದಂತೆ ಸಹಾಯ ಮಾಡಲು ಸಿದ್ಧವಿದ್ದೇವೆ. ಇದೊಂದು ಅತ್ಯುತ್ತಮ ಕೆಲಸವಾಗಿದೆ. ಸೇವಾ ಮನೋಭಾವವನ್ನು ಬಿಂಬಿಸುತ್ತದೆ. ನಾನು ನನ್ನ ಪತಿ ಒಟ್ಟಾಗಿ ಮುಂಬೈ ಮಹಾನಗರ ಪಾಲಿಕೆಯಿಂದ ಮಾನ್ಯತೆ ಪಡೆದಿರುವ ಸರ್ಕಾರಿ ಶಾಲೆಗಳ ಮೂಲಸೌಕರ್ಯ ಹಾಗೂ ಅವುಗಳ ನವೀಕರಣಕ್ಕೆ ಶ್ರಮಿಸುತ್ತೇವೆ ಎಂದು ಹೇಳಿದ್ದಾರೆ.

ರಣ್‌ಬೀರ್‌ ಕಪೂರ್‌ ನೆಕ್ಸ್ಟ್‌ ಸಿನಿಮಾ ರಾಮಾಯಣ ರಿಲೀಸ್‌ ಆಗುವ ಹಂತದಲ್ಲೇ ಶಾಲೆಗಳ ನವೀಕರಣ ಯಾಕೆ ಅನೌನ್ಸ್‌ ಮಾಡಬೇಕು? ಮಾಡುವ ಮನಸ್ಸಿದ್ದರೆ ಮುಂಚೆಯೇ ಮಾಡಬಹುದಿತ್ತಲ್ವಾ? ಎಂದು ನೆಟ್ಟಿಗರು ಕಮೆಂಟ್‌ ಮಾಡಿದ್ದಾರೆ. ಮೋದಿಜಿ ಜನ್ಮದಿನಕ್ಕೆ ಮಾಡ್ತಿದ್ದೇವೆ ಎಂದು ಹೇಳಿದ್ದಾರೆ, ಮೋದಿಜಿ ಜನ್ಮದಿನಕ್ಕೂ ರಾಮಾಯಣ ಸಿನಿಮಾಕ್ಕೂ ಸಂಬಂಧವೇ ಇಲ್ಲ ಎಂದು ರಣ್‌ಬೀರ್‌ ಆಲಿಯಾ ಫ್ಯಾನ್ಸ್‌ ಉತ್ತರ ನೀಡಿದ್ದಾರೆ.

Must Read