2018ರ ಹಿಟ್​ ಆಯಂಡ್​ ರನ್ ಕೇಸ್: ನಟ ದಲೀಪ್​ ತಾಹಿಲ್​​ ಗೆ ಜೈಲು ಶಿಕ್ಷೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

2018ರ ಹಿಟ್​ ಆಯಂಡ್​ ರನ್ ಕೇಸ್​ ಸಂಬಂಧಿಸಿದಂತೆ ಹಿರಿಯ ನಟ ದಲೀಪ್​ ತಾಹಿಲ್​​ ಗೆ ಎರಡು ತಿಂಗಳು ಜೈಲು ಶಿಕ್ಷೆ ವಿಧಿಸಲಾಗಿದೆ.

2018ರಲ್ಲಿ ಹಿರಿಯ ನಟ ದಲೀಪ್ ತಾಹಿಲ್ (Dalip Tahil) ಅವರು ಕುಡಿದು ವಾಹನ ಚಲಾಯಿಸಿದ್ದಲ್ಲದೇ, ಮಹಿಳೆಗೆ ಡಿಕ್ಕಿ ಹೊಡೆದು ಗಾಯಗೊಳಿಸಿದ್ದ ಆರೋಪ ಇತ್ತು. 2018ರಿಂದ ನಟ ಕಾನೂನು ಹೋರಾಟ ನಡೆಸುತ್ತಿದ್ದರು. ಸುದೀರ್ಘ ಕಾನೂನು ಪ್ರಕ್ರಿಯೆ ಬಳಿಕ ಅಂತಿಮವಾಗಿ ತೀರ್ಪು ಬಂದಿದ್ದು, ದಲೀಪ್ ತಾಹಿಲ್‌ ಅವರಿಗೆ ಎರಡು ತಿಂಗಳು ಜೈಲು ಶಿಕ್ಷೆ ವಿಧಿಸಲಾಗಿದೆ.

ವರದಿಗಳ ಪ್ರಕಾರ, ಹಿರಿಯ ನಟನ ಉಸಿರಾಟದಲ್ಲಿ ಆಲ್ಕೋಹಾಲ್ ವಾಸನೆಯನ್ನು ಗಮನಿಸಿದ ವೈದ್ಯರ ಸಾಕ್ಷ್ಯವನ್ನು ಆಧರಿಸಿ ಈ ಶಿಕ್ಷೆ ವಿಧಿಸಲಾಗಿದೆ. 2018ರಲ್ಲಿ ಅಪಘಾತ ನಡೆದ ಸಂದರ್ಭ ಆಲ್ಕೋಹಾಲ್ ಪರೀಕ್ಷೆಗೆ ರಕ್ತದ ಮಾದರಿ ನೀಡದೇ, ಪೊಲೀಸ್​ ತನಿಖೆಗೆ ಸಹಕಾರ ನೀಡಿರಲಿಲ್ಲ.

ಏನಿದು ಪ್ರಕರಣ? 2018ರಲ್ಲಿ ಹಿರಿಯ ನಟ ದಲೀಪ್​ ತಾಹಿಲ್​​ ಅವರ ಗಾಡಿ ಅಪಘಾತಕ್ಕೊಳಗಾಗಿತ್ತು. ನಟನ ಕಾರು ಮತ್ತು ಆಟೋರಿಕ್ಷಾ ನಡುವೆ ಡಿಕ್ಕಿ ಸಂಭವಿಸಿತ್ತು. ಪರಿಣಾಮ, ಇಬ್ಬರು ಪ್ರಯಾಣಿಕರಿಗೆ ಗಾಯಗಳಾಗಿದ್ದವು. ಸ್ಥಳದಿಂದ ಪರಾರಿಯಾಗಲು ಸಹ ಪ್ರಯತ್ನಿಸಿದ್ದರು. ಆದ್ರೆ ಗಣೇಶ ಮೂರ್ತಿ ನಿಮಜ್ಜನ ಮೆರವಣಿಗೆ ಹಿನ್ನೆಲೆ ಉಂಟಾದ ಟ್ರಾಫಿಕ್ ಜಾಮ್‌ನಿಂದಾಗಿ ಆ ಪ್ರಯತ್ನ ವಿಫಲವಾಯಿತು. ಆ ಸಮಯದಲ್ಲಿ ನಟ ದಲೀಪ್​ ತಾಹಿಲ್​​ ಅವರನ್ನು ವಶಕ್ಕೆ ಪಡೆಯಲಾಯಿತು.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!