ಹೊಸದಿಗಂತ ಡಿಜಿಟಲ್ ಡೆಸ್ಕ್:
ಚುನಾವಣಾ ಆಯೋಗದ ಅಧ್ಯಕ್ಷ ರಾಜೀವ್ ಕುಮಾರ್ ಬಹು ನಿರೀಕ್ಷಿತ 2024ರ ಲೋಕಸಭಾ ಚುನಾವಣೆ ದಿನಾಂಕ ಘೋಷಿಸಿದೆ. ಲೋಕಸಭೆ ಚುನಾವಣೆ ಏಳು ಹಂತಗಳಲ್ಲಿ ನಡೆಯಲಿದ್ದು, ಏಪ್ರಿಲ್ 19 ರಂದು ಮೊದಲ ಹಂತದ ಮತದಾನ ನಡೆಯಲಿದ್ದು, ಜೂನ್ 4 ರಂದು ಮತ ಎಣಿಕೆ ನಡೆಯಲಿದೆ ಎಂದು ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಸುದ್ದಿಗೋಷ್ಠಿಯನ್ನುದ್ದೇಶಿಸಿ ತಿಳಿಸಿದರು.
ವಿಶ್ವದ ಅತಿ ದೊಡ್ಡ ಮತದಾನಕ್ಕೆ ಭಾರತ ಸಿದ್ಧವಾಗಿದೆ. ಈ ಬಾರಿ 97 ಕೋಟಿಗೂ ಹೆಚ್ಚು ಜನರು ಮತ ಚಲಾಯಿಸಲಿದ್ದಾರೆ. ಸರಿಸುಮಾರು 11,000 ಲಕ್ಷ ಆಸುಪಾಸು ಮತಗಟ್ಟೆಗಳಲ್ಲಿ ಮತದಾನ ನಡೆಯುತ್ತದೆ. ಮತಗಟ್ಟೆಯನ್ನು 1.5 ಕೋಟಿ ಸಿಬ್ಬಂದಿ ಮತಗಟ್ಟೆ ಕಾರ್ಯ ನಿರ್ವಹಿಸುತ್ತಾರೆ. ಈ ಬಾರಿ 49.7 ಕೋಟಿ ಪುರುಷ ಮತದಾರರು ಮತ್ತು 47.1 ಕೋಟಿ ಮಹಿಳಾ ಮತದಾರರಿದ್ದಾರೆ. 19 ಕೋಟಿಗಿಂತಲೂ ಹೆಚ್ಚು ಯುವ ಮತದಾರರಿದ್ದು, 1.8 ಕೋಟಿ ಮತದಾರರು ಮೊದಲ ಬಾರಿಗೆ ಮತದಾನ ಮಾಡುತ್ತಿದ್ದಾರೆ ಎಂದು ಆಯೋಗ ತಿಳಿಸಿದೆ.
ನಿರ್ದಿಷ್ಟವಾಗಿ ಹೇಳುವುದಾದರೆ, 85 ವರ್ಷಕ್ಕಿಂತ ಮೇಲ್ಪಟ್ಟ 82 ಲಕ್ಷ , 100 ವರ್ಷಕ್ಕಿಂತ ಮೇಲ್ಪಟ್ಟ 2.18 ಲಕ್ಷ ಮತದಾರರು ಮತ್ತು89 ಲಕ್ಷ ವಿಕಲಚೇತನ ಮತದಾರರಿದ್ದಾರೆ. ಹಿರಿಯರು ಮತ್ತು ವಿಶೇಷ ಅಗತ್ಯವುಳ್ಳವರು ಮನೆಯಲ್ಲಿಯೇ ಮತದಾನ ಮಾಡಬಹುದು ಎಂದು ಚುನಾವಣಾ ಆಯೋಗ ತಿಳಿಸಿದೆ.