ಹೊಸದಿಗಂತ ಡಿಜಿಟಲ್ ಡೆಸ್ಕ್:
ಹದಿನೇಳು ಸಂಸದರು ಮತ್ತು ಎರಡು ಸಂಸದೀಯ ಸ್ಥಾಯಿ ಸಮಿತಿಗಳನ್ನು 2025ರ ಸಂಸದ ರತ್ನ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಸಂಸದರು ನೀಡಿದ ಕೊಡುಗೆಗಾಗಿ ಪ್ರೈಮ್ ಪಾಯಿಂಟ್ ಫೌಂಡೇಶನ್ ಸಂಸದರಿಗೆ ಈ ಪ್ರಶಸ್ತಿ ನೀಡುತ್ತಿದೆ. ರಾಷ್ಟ್ರೀಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಹಂಸರಾಜ್ ಅಹಿರ್ ಅಧ್ಯಕ್ಷತೆಯ ತೀರ್ಪುಗಾರರ ಸಮಿತಿಯು ಆಯ್ಕೆ ಮಾಡಿದೆ.
ಮಹತಾಬ್, ಸುಪ್ರಿಯಾ ಸುಳೆ (ಎನ್ಸಿಪಿ-ಎಸ್ಪಿ), ಎನ್.ಕೆ. ಪ್ರೇಮಚಂದ್ರನ್ (ಆರ್ಎಸ್ಪಿ) ಮತ್ತು ಶ್ರೀರಂಗ ಅಪ್ಪ ಬಾರ್ನೆ ಅವರು ‘ಸಂಸದೀಯ ಪ್ರಜಾಪ್ರಭುತ್ವಕ್ಕೆ ಅತ್ಯುತ್ತಮ ಮತ್ತು ಸ್ಥಿರ ಕೊಡುಗೆ’ಗಾಗಿ ಪ್ರಶಸ್ತಿಗಳನ್ನು ಸ್ವೀಕರಿಸಲಿದ್ದಾರೆ. ಈ ನಾಲ್ವರು ಸಂಸದರು 16 ಮತ್ತು 17ನೇ ಲೋಕಸಭೆಯಲ್ಲಿ ಅತ್ಯುತ್ತಮ ಕೆಲಸ ಮಾಡಿದ್ದರು ಹಾಗೂ ಸದ್ಯ ಅವರ ಅಧಿಕಾರಾವಧಿಯಲ್ಲಿಯೂ ಅದೇ ರೀತಿ ಮುಂದುವರೆದಿದ್ದಾರೆ ಎಂದು ಪ್ರೈಮ್ ಪಾಯಿಂಟ್ ಫೌಂಡೇಶನ್ ಹೇಳಿಕೆ ತಿಳಿಸಿದೆ.
ಸ್ಮಿತಾ ವಾಘ್ (ಬಿಜೆಪಿ), ಅರವಿಂದ ಸಾವಂತ್ (ಶಿವಸೇನಾ ಯುಬಿಟಿ), ನರೇಶ್ ಗಣಪತ್ ಮಾಸ್ಕೆ(ಶಿವಸೇನಾ), ವರ್ಷಾ ಗಾಯಕ್ವಾಡ್(ಕಾಂಗ್ರೆಸ್), ಮೇಧಾ ಕುಲಕರ್ಣಿ(ಬಿಜೆಪಿ), ಪ್ರವೀಣ್ ಪಟೇಲ್ (ಬಿಜೆಪಿ), ರವಿ ಕಿಶನ್ (ಬಿಜೆಪಿ), ನಿಶಿಕಾಂತ್ ದುಬೆ (ಬಿಜೆಪಿ), ಬಿದ್ಯುತ್ ಬರನ್ ಮಹಾತೋ (ಬಿಜೆಪಿ), ಪಿ.ಪಿ. ಚೌಧರಿ (ಬಿಜೆಪಿ), ಮದನ್ ರಾಥೋಡ್ (ಬಿಜೆಪಿ), ಸಿ.ಎನ್. ಅಣ್ಣಾದೊರೈ (ಡಿಎಂಕೆ) ಮತ್ತು ದಿಲೀಪ್ ಸೈಕಿಯಾ (ಬಿಜೆಪಿ) ಸೇರಿದ್ದಾರೆ.
ಸಂಸತ್ತಿಗೆ ಸಲ್ಲಿಸಿದ ವರದಿಗಳ ಆಧಾರದ ಮೇಲೆ ಅವರ ಅಸಾಧಾರಣ ಕಾರ್ಯಕ್ಷಮತೆಗಾಗಿ ಎರಡು ಇಲಾಖಾ ಸಂಬಂಧಿತ ಸ್ಥಾಯಿ ಸಮಿತಿಗಳಿಗೂ ಪ್ರಶಸ್ತಿ ಘೋಷಿಸಲಾಗಿದೆ. ಹಣಕಾಸು ಸ್ಥಾಯಿ ಸಮಿತಿಗೆ ಮಹ್ತಾಬ್ ಅಧ್ಯಕ್ಷತೆ ವಹಿಸಿದ್ದರೆ, ಕೃಷಿ ಸ್ಥಾಯಿ ಸಮಿತಿಗೆ ಕಾಂಗ್ರೆಸ್ನ ಚರಂಜಿತ್ ಸಿಂಗ್ ಚನ್ನಿ ಅಧ್ಯಕ್ಷತೆ ವಹಿಸಿದ್ದಾರೆ.