ಹತ್ತು ಗಂಟೆಯಲ್ಲಿ 21 ಎಕರೆ ಉಳುವೆ ಮಾಡಿದ ಜೋಡೆತ್ತುಗಳು!

ಹೊಸ ದಿಗಂತ ವರದಿ,ಕಲಬುರಗಿ:

ಜಿಲ್ಲೆಯ ಯಡ್ರಾಮಿ ತಾಲ್ಲೂಕಿನ ಮಳ್ಳಿ ಗ್ರಾಮದಲ್ಲಿ ಜೋಡಿ ಎತ್ತುಗಳು ಕೇವಲ 10 ಗಂಟೆಯಲ್ಲಿ 21 ಎಕರೆ ಹೊಲ ಉಳುಮೆಯನ್ನು ಮಾಡಿ ಗ್ರಾಮದ ಸಾರ್ವಜನಿಕರನ್ನು ಹುಬ್ಬೆರಿಸುವಂತೆ ಮಾಡಿವೆ.

ಜಿಲ್ಲೆಯ ಯಡ್ರಾಮಿ ತಾಲ್ಲೂಕಿನ ಮಳ್ಳಿ ಗ್ರಾಮದ ರೈತ ದಾವಲಸಾಬ ಗೋಲಗೇರಿ ಎಂಬುವವರ ಜೋಡಿ ಎತ್ತುಗಳು 10 ಗಂಟೆಗಳ ಅವಧಿಯಲ್ಲಿ 21 ಎಕರೆ ಹೊಲ ಉಳುಮೆ ಮಾಡಿ ಸೈ ಎನಿಸಿಕೊಂಡಿವೆ.

ರಾಜೇಸಾಬ ಮನಿಯಾರ್ ಎಂಬುವವರ ಹತ್ತಿ ಬಿತ್ತನೆ ಮಾಡಿದ ಹೊಲದಲ್ಲಿ ಹತ್ತಿ, ತೂಗರಿ ಬೆಳೆ ಸಾಲಿನ ಮಧ್ಯದಲ್ಲಿ ಹರಗುವ ಮೂಲಕ ದಾವಲಸಾಬ ಗೋಲಗೇರಿ ಅವರ ಎತ್ತುಗಳು ಈ ಸಾಧನೆ ಮಾಡುವ ಮೂಲಕ ಗ್ರಾಮಸ್ಥರ ಮೆಚ್ಚುಗೆ ಪಾತ್ರವಾಗಿವೆ. ಹೀಗೆ ಸಾಧನೆ ಮಾಡಿರುವ ಎತ್ತುಗಳನ್ನು ಗ್ರಾಮಸ್ಥರು ಮೆರವಣಿಗೆ ನಡೆಸಿ ಸಂಭ್ರಮಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!