ಉಕ್ರೇನ್‌ ನಿಂದ 219 ವಿದ್ಯಾರ್ಥಿಗಳ ಏರ್ ಲಿಫ್ಟ್: ಮುಂಬೈಗೆ ಬಂತು ಮೊದಲ ವಿಮಾನ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಷ್ಯಾ- ಉಕ್ರೇನ್‌ ನಡುವಿನ ಯುದ್ಧದ ಭೀಕರತೆ ನಡುವೆ ಉಕ್ರೇನ್‌ನಿಂದ ಭಾರತದ 219 ಪ್ರಯಾಣಿಕರನ್ನು ಹೊತ್ತ ಮೊದಲ ವಿಶೇಷ ವಿಮಾನ ಮುಂಬೈಗೆ ಬಂದಿಳಿದಿದೆ.
ಇಂದು ಮಧ್ಯಾಹ್ನ ರೊಮೇನಿಯಾದ ರಾಜಧಾನಿ ಬುಕಾರೆಸ್ಟ್‌ನಿಂದಪ್ರಯಾಣ ಆರಂಭಿಸಿದ ವಿಮಾನ ಇದೀಗ ಭಾರತಕ್ಕೆ ಬಂದು ತಲುಪಿದೆ.
ಅಪರೇಷ್‌ ಗಂಗಾ ಹೆಸರಿನಲ್ಲಿ ಕೇಂದ್ರ ಸರ್ಕಾರ ಉಕ್ರೇನ್‌ ನಿಂದವಿದ್ಯಾರ್ಥಿಗಳನ್ನು ಭಾರತಕ್ಕೆ ಕರೆತರುವ ಕಾರ್ಯಾಚರಣೆಯನ್ನು ಕೈಗೊಂಡಿದೆ.
ಈ ಕುರಿತು ಟ್ವಿಟರ್‌ನಲ್ಲಿ ಮಾಹಿತಿ ಹಂಚಿಕೊಂಡ ಕೇಂದ್ರ ಸಚಿವ ಪಿಯೂಷ್‌ ಗೋಯಲ್‌, ವಿಮಾನ ನಿಲ್ದಾಣಕ್ಕೆ ಆಗಮಿಸಿ ವಿದ್ಯಾರ್ಥಿಗಳನ್ನು ಸ್ವಾಗತಿಸಿದ್ದಾರೆ.
ಇದೇ ವೇಳೆ ಸುದ್ದಿಸಂಸ್ಥೆಗೆ ಮಾಹಿತಿ ನೀಡಿದ ಅವರು, ಉಕ್ರೇನ್‌ನಲ್ಲಿ ಸಿಲುಕಿರುವ ಪ್ರತಿಯೊಬ್ಬ ಭಾರತೀಯನನ್ನು ಮರಳಿ ದೇಶಕ್ಕೆ ಕರೆತರುವುದು ನಮ್ಮ ಮುಖ್ಯ ಉದ್ದೇಶವಾಗಿತ್ತು. ಮೊದಲ ಬ್ಯಾಚ್ ನಲ್ಲಿ 219 ವಿದ್ಯಾರ್ಥಿಗಳು ಇಲ್ಲಿಗೆ ಆಗಮಿಸಿದ್ದಾರೆ. ಎರಡನೆಯ ಬ್ಯಾಚ್‌ ಅತಿ ಶೀಘ್ರದಲ್ಲೇ ದೆಹಲಿ ತಲುಪಲಿದೆ. ಅವರೆಲ್ಲರೂ ಮನೆಗೆ ಮರಳುವವರೆಗೆ ನಾವು ಈ ಕಾರ್ಯಾಚರಣೆಯನ್ನು ನಿಲ್ಲಿಸುವುದಿಲ್ಲ ಎಂದು ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!