ಇಸ್ರೇಲ್‍ನಿಂದ ತಾಯ್ನಾಡಿಗೆ ಸುರಕ್ಷಿತವಾಗಿ ಮರಳಿದ 235 ಭಾರತೀಯರು!

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಯುದ್ಧಪೀಡಿತ ಇಸ್ರೇಲ್‍ನಲ್ಲಿ ಸಿಲುಕಿಕೊಂಡಿದ್ದ 235 ಮಂದಿ ಭಾರತೀಯರು ಇಂದು ತಾಯ್ನಾಡಿಗೆ ಮರಳಿದ್ದಾರೆ. ಇಸ್ರೇಲ್ ಮತ್ತು ಪ್ಯಾಲೆಸ್ತೇನ್‍ನಲ್ಲಿರುವ ಭಾರತೀಯರನ್ನು ಸ್ವದೇಶಕ್ಕೆ ಕರೆತರಲು ಕೇಂದ್ರ ವಿದೇಶಾಂಗ ವ್ಯವಹಾರಗಳ ಇಲಾಖೆ ಆಪರೇಷನ್ ಅಜಯ್ ಕಾರ್ಯಾಚರಣೆ ಆರಂಭಿಸಿದೆ.

ಶುಕ್ರವಾರವಷ್ಟೇ ಇಸ್ರೇಲ್‍ನಿಂದ 230 ಮಂದಿ ಭಾರತೀಯರು ಆಗಮಿಸಿದ್ದರು. ಶನಿವಾರ ಬೆಳಿಗ್ಗೆ ವಿಶೇಷ ವಿಮಾನದಲ್ಲಿ 235 ಮಂದಿ ಪ್ರಯಾಣಿಕರನ್ನು ಹೊತ್ತೊಯ್ದ ವಿಮಾನವು ಮುಂಜಾನೆ ನವದೆಹಲಿಯ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನನಿಲ್ದಾಣಕ್ಕೆ ಆಗಮಿಸಿತು.

ಭಾರತಕ್ಕೆ ಬಂದವರಲ್ಲಿ ಒಂಬತ್ತು ಮಂದಿ ಕನ್ನಡಿಗರು ಸೇರಿದ್ದಾರೆ. ಇದರಲ್ಲಿ ಮೈಸೂರಿನ ಐವರು ಹಾಗೂ ಬೆಂಗಳೂರಿನ ಬಸವನಗುಡಿಯ ನಾಲ್ಕು ಮಂದಿ ಸೇರಿದ್ದಾರೆ. ತಾಯ್ನಾಡಿಗೆ ಬಂದ ಭಾರತೀಯರನ್ನು ಕೇಂದ್ರ ಸಚಿವ ರಾಜಕುಮಾರ್ ರಾಜನ್‍ಸಿಂಗ್ ಅವರು ಹೂಗುಚ್ಛ ನೀಡಿ ಆತ್ಮೀಯವಾಗಿ ಬರಮಾಡಿಕೊಂಡರು.

ಕೇಂದ್ರ ಸರ್ಕಾರಕ್ಕೆ ನಾವು ಎಷ್ಟು ಅಭಿನಂದನೆ ಸಲ್ಲಿಸಿದರೂ ಸಾಲದು. ಅತ್ಯಂತ ಕ್ಲಿಷ್ಟಕರ ಪರಿಸ್ಥಿತಿಯಲ್ಲೂ ನಾವು ಸುರಕ್ಷಿತವಾಗಿ ಬಂದಿದ್ದೇವೆ ಎಂದರೆ ಅಚ್ಚರಿಯೇ ಸರಿ. ನಮಗೆ ಕುಡಿಯಲು ಒಂದಿಷ್ಟು ನೀರು, ಹಣ್ಣು ಬಿಟ್ಟರೆ ಏನೂ ಸಿಗುತ್ತಿರಲಿಲ್ಲ. ಸರಿಯಾದ ಸಮಯಕ್ಕೆ ಕೇಂದ್ರ ಸರ್ಕಾರ ನಮ್ಮನ್ನು ಕರೆಸಿಕೊಂಡಿದೆ. ಇದಕ್ಕಾಗಿ ನಾವು ಸದಾ ಕೃತಜ್ಞತರಾಗಿರುತ್ತೇವೆ ಎಂದು ಅನೇಕರು ಭಾವುಕರಾಗಿ ಹೇಳಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!