ಹೊಸದಿಗಂತ ಡಿಜಿಟಲ್ ಡೆಸ್ಕ್
ಬಾರತದ ಬಾಕ್ಸರ್ ನೀತು ಘಂಗಾಸ್ ಮಹಿಳೆಯರ 48 ಕೆಜಿ ತೂಕ ವಿಭಾಗದಲ್ಲಿ ಇಂಗ್ಲೆಂಡ್‌ನ ಬಾಕ್ಸರ್ ಅನ್ನು ಸದೆಬಡಿಯುವ ಮೂಲಕ ಭಾರತಕ್ಕೆ ಚಿನ್ನದ ಪದಕವನ್ನು ಗಳಿಸಿಕೊಟ್ಟಿದ್ದಾರೆ. ಭಾರತದ ಬಾಕ್ಸರ್ ನೀತು ಪಂಚ್‌ಗಳಿಗೆ ಇಂಗ್ಲೆಂಡ್‌ನ ಬಾಕ್ಸರ್ ಬಳಿ ಉತ್ತರವೇ ಇರಲಿಲ್ಲ. ಮೂರು ಸುತ್ತುಗಳಲ್ಲೂ ಪಾರಮ್ಯ ಮೆರೆದ ನೀತು ಇಂಗ್ಲಿಷ್ ಬಾಕ್ಸರ್ ಚೇತರಿಸಿಕೊಂಡು ಮರು ಹೋರಾಟ ನಡೆಸಲು ಅವಕಾಶವನ್ನೇ ನೀಡಲಿಲ್ಲ. ಎಲ್ಲಾ ಮೂರು ಸುತ್ತುಗಳಲ್ಲಿ ಇಂಗ್ಲಿಷ್ ಬಾಕ್ಸರ್‌ಗಿಂತ ತೀರ್ಪುಗಾರರು ನೀತುಗೆ ಹೆಚ್ಚಿನ ಅಂಕಗಳನ್ನು ನೀಡಿದರು.
ಶನಿವಾರ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಕೆನಡಾದ ಬಾಕ್ಸರ್ ಪ್ರಿಯಾಂಕಾ ಧಿಲ್ಲೋನ್ ಅವರನ್ನು ಸೋಲಿಸಿ ನೀತು ಫೈನಲ್ ಪ್ರವೇಶಿಸಿದ್ದರು. ಆ ಪಂದ್ಯದಲ್ಲಿ ನೀತು ಪಂಚ್‌ಗಳಿಗೆ ಪ್ರಿಯಾಂಕ ತತ್ತರಿಸಿಹೋಗಿದ್ದರು, ರೆಫರಿ ಆಟವನ್ನು ನಿಲ್ಲಿಸಿ ನೀತುರನ್ನು ವಿಜೇತೆ ಎಂದು ಘೋಷಿಸಬೇಕಾಯಿತು. ಫೈನಲ್‌ನಲ್ಲೂ ನೀತು ಅದೇ ಮಾದರಿಯಲ್ಲಿ ಏಕಪಕ್ಷಿಯವಾಗಿ ಜಯ ಸಾಧಿಸಿ ಚಿನ್ನ ಗೆದ್ದಿದ್ದಾರೆ.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ