August 31, 2026
Monday, August 31, 2026
spot_img

ಶ್ರೀಲಂಕಾ ನೌಕಪಡೆಯಿಂದ 25 ಭಾರತೀಯ ಮೀನುಗಾರರ ಬಂಧನ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಶ್ರೀಲಂಕಾದ ನೌಕಪಡೆಯು 25 ಭಾರತೀಯ ಮೀನುಗಾರರನ್ನು ಸೋಮವಾರ ಬಂಧಿಸಿದೆ.

ಶ್ರೀಲಂಕಾದ ಜಾಫ್ನಾ ಪ್ರದೇಶದಲ್ಲಿರುವ ಕಂಕಸಂತುರೈ ಸಮುದ್ರದಲ್ಲಿ ಮೀನುಗಾರರನ್ನು ಬಂಧಿಸಿದ್ದು, ಅವರ ಎರಡು ಹಾಯಿ ದೋಣಿಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ನೌಕಾಪಡೆ ಹೇಳಿಕೆಯಲ್ಲಿ ತಿಳಿಸಿದೆ.

ಶ್ರೀಲಂಕಾದ ವ್ಯಾಪ್ತಿಯ ಸಮುದ್ರದಲ್ಲಿ ಮೀನುಗಾರಿಕೆ ಮಾಡಿದ ಆರೋಪದ ಮೇಲೆ ಬಂಧಿಸಿದ್ದು, ಮುಂದಿನ ಕಾನೂನು ಕ್ರಮಗಳಿಗಾಗಿ ಜಾಫ್ನಾದ ಮೈಲಿಡ್ಡಿಯ ಮೀನುಗಾರಿಕಾ ನಿರೀಕ್ಷಕರಿಗೆ ಬಂಧಿತರನ್ನು ಹಸ್ತಾಂತರಿಸಲಾಗುವುದು.

2025 ರಲ್ಲಿ ಮೀನುಗಾರಿಕೆ ಆರೋಪದ ಮೇಲೆ 346 ಭಾರತೀಯ ಮೀನುಗಾರರನ್ನು ಬಂಧಿಸಿದ್ದು, 44 ಹಾಯಿದೋಣಿಗಳನ್ನು ವಶಪಡಿಸಿಕೊಂಡಿರುವುದಾಗಿ ಶ್ರೀಲಂಕಾದ ನೌಕಪಡೆ ಈ ಹಿಂದೆ ಹೇಳಿಕೆಯಲ್ಲಿ ತಿಳಿಸಿತು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !