ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೋಮು ದ್ವೇಷಕ್ಕೆ ಬಲಿಯಾದ ಆರು ಮಂದಿಯ ಕುಟುಂಬದವರಿಗೆ ಇಂದು ಸಿಎಂ ಸಿದ್ದರಾಮಯ್ಯ 25 ಲಕ್ಷ ರೂಪಾಯಿ ಚೆಕ್‌ನ್ನು ವಿತರಿಸಿದ್ದಾರೆ.
ಒಂದು ಜಾತಿ, ಧರ್ಮದ ಪರವಾದ ಸರ್ಕಾರ ನಮ್ಮದಲ್ಲ. ಇದು ಸರ್ವರಿಗೂ ಒಂದೇ ಸರ್ಕಾರ. ಬಿಜೆಪಿಯ ದ್ವೇಷ ಮತ್ತು ತಾರತಮ್ಯದ ನೀತಿಯಿಂದ ವಂಚನೆಗೆ ಒಳಗಾಗಿದ್ದ ಕುಟುಂಬಗಳಿಗೆ ಚೆಕ್ ವಿತರಿಸಿದ್ದೇನೆ ಎಂದಿದ್ದಾರೆ.
ಮೃತರ ಕುಟುಂಬದ ಕಣ್ಣೀರು ಒರೆಸುವ ಕೆಲಸವನ್ನೂ ಹಳೆಯ ಸರ್ಕಾರ ಮಾಡಿಲ್ಲ, ಬಿಜೆಪಿ ಸಾಕಷ್ಟು ರಾಜಕೀಯ ಮಾಡಿದೆ. ನಾವು ಹಾಗೆ ಮಾಡೋದಿಲ್ಲ ಎಲ್ಲರೂ ನಮಗೆ ಮುಖ್ಯ. ಬಿಜೆಪಿ ಮಾಡಿದ ಪರಿವಾರ ತಾರತಮ್ಯವನ್ನು ಸರಿಪಡಿಸಿದ್ದೇವೆ ಎಂದಿದ್ದಾರೆ.