ಹೊಸದಿಗಂತ ಡಿಜಿಟಲ್ ಡೆಸ್ಕ್
ಉತ್ತರ ಟರ್ಕಿಯ ಅಂಕಾರದಲ್ಲಿನ ಕಲ್ಲಿದ್ದಲು ಗಣಿಯಲ್ಲಿ ಮೀಥೇನ್ ಸ್ಫೋಟ ಸಂಭವಿಸಿ ಕನಿಷ್ಠ 25 ಜನರು ಸಾವನ್ನಪ್ಪಿದ ಘಟನೆ ನಡೆದಿದೆ. 11 ಕ್ಕೂ ಹೆಚ್ಚಿನ ಜನರನ್ನು ರಕ್ಷಿಸಲಾಗಿದ್ದು ಆಸ್ಪತ್ರೆಗೆ ರವಾನಿಸಲಾಗಿದೆ.
ಟರ್ಕಿಯ ಕಪ್ಪು ಸಮುದ್ರದ ಕರಾವಳಿಯಲ್ಲಿರುವ ಸಣ್ಣ ಕಲ್ಲಿದ್ದಲು ಗಣಿಗಾರಿಕೆ ಪಟ್ಟಣವಾದ ಅಮಾಸ್ರಾದಲ್ಲಿ ಭೀಕರ ದುರ್ಘಟನೆ ಸಂಭವಿಸಿದೆ. ಈ ಬಗ್ಗೆ ಮಾತನಾಡಿರುವ ಆಂತರಿಕ ಸಚಿವ ಸುಲೈಮಾನ್ ಸೊಯ್ಲು, “ನಾವು ವಿಷಾದದ ಪರಿಸ್ಥಿತಿಯನ್ನು ಎದುರಿಸುತ್ತಿದ್ದೇವೆ ಎಂದು ಹೇಳಿದರು. ನಮ್ಮ 110 ಸಹೋದರರು ಈ ಭೂಗತ ಗಣಿಯಲ್ಲಿ ಕೆಲಸ ಮಾಡುತ್ತಿದ್ದರು. ಅವರಲ್ಲಿ ಕೆಲವರು ಎಚ್ಚತ್ತು ಹೊರಬಂದರು ಮತ್ತು ಆ ಬಳಿಕ ಕೆಲವರನ್ನು ರಕ್ಷಿಸಲಾಗಿದೆ. 300 ಮತ್ತು 350 ಮೀಟರ್ (985 ರಿಂದ 1,150 ಅಡಿ) ನಡುವಿನ ಎರಡು ಪ್ರತ್ಯೇಕ ಪ್ರದೇಶಗಳಲ್ಲಿ ಸುಮಾರು 50 ಗಣಿಗಾರರು ಸಿಕ್ಕಿಬಿದ್ದಿದ್ದಾರೆ ಎಂಬ ವರದಿಗಳನ್ನು ಸೋಯ್ಲಿ ದೃಢಪಡಿಸಿದರು.
ಟರ್ಕಿಯ ಅಧ್ಯಕ್ಷ ರೆಸೆಪ್ ತಯ್ಯಿಪ್ ಎರ್ಡೊಗನ್ ಈ ಬಗ್ಗೆ ಟ್ವಿಟ್ ಮಾಡಿದ್ದು, ಜೀವಹಾನಿ ಮತ್ತಷ್ಟು ಹೆಚ್ಚಾಗದಿರಲಿ ಎಂದು ನಾವು ಪ್ರಾರ್ಥನೆ ಮಾಡುತ್ತಿದ್ದೇವೆ. ನಮ್ಮ ಗಣಿಗಾರರು ಜೀವಂತವಾಗಿ ಸಿಗಲಿ ಎಂಬುದು ನಮ್ಮ ಆಶಯವಾಗಿದೆ ಎಂದು ಟ್ವೀಟ್ ಮಾಡಿದ್ದಾರೆ.
ಗಣಿಯಿಂದ ಜೀವಂತವಾಗಿ ರಕ್ಷಿಸಲ್ಪಟ್ಟವರಲ್ಲಿ ಹಲವರು “ಗಂಭೀರ ಗಾಯಗಳಿಂದ” ಬಳಲುತ್ತಿದ್ದಾರೆ ಎಂದು ಅಮಸ್ರಾ ಮೇಯರ್ ರೆಕೈ ಕಾಕಿರ್ ಹೇಳಿದ್ದಾರೆ.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ