ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೋಮು ಸಂಘರ್ಷಕ್ಕೆ ಹರಿಯಾಣ ತತ್ತರಿಸಿದ್ದು, ನುಹ್ ಹಾಗೂ ಗುರುಗ್ರಾಮ್ ಜಿಲ್ಲೆಗಳು ಅಕ್ಷರಶಃ ಹೊತ್ತಿ ಉರಿಯುತ್ತಿವೆ.
ಗಲಭೆ ಆರಂಭವಾದಾಗಿನಿಂದಲೇ ಕರ್ಫ್ಯೂ ವಿಧಿಸಲಾಗಿದ್ದು, ಕರ್ಫ್ಯೂಗೆ ತಲೆ ಕೆಡಿಸಿಕೊಳ್ಳದ ಜನ ಬೀದಿಗಳಿದು ಹಿಂಸಾಚಾರದಲ್ಲಿ ತೊಡಗಿದ್ದಾರೆ. ಕೋಮು ಗಲಭೆ ಸೃಷ್ಟಿಸಿದ ಆರೋಪಿಗಳಿಗೆ ಹರಿಯಾಣ ಸರ್ಕಾರ ಶಾಕ್ ನೀಡಿದ್ದು, ನುಹ್‌ನಿಂದ 20 ಕಿ.ಮೀ ದೂರದಲ್ಲಿರುವ ತೌರುದಲ್ಲಿ ವಾಸಿಸುತ್ತಿರುವ ವಲಸಿಗರ ಗುಡಿಸಲುಗಳನ್ನು ಬುಲ್ಡೋಝರ್ ಬಳಸಿ ನೆಲಸಮಗೊಳಿಸಲಾಗಿದೆ.
ಸರ್ಕಾರದ ಜಮೀನನ್ನು ಅತಿಕ್ರಮಿಸಿಕೊಂಡಿದ್ದು, ಕ್ರಮ ಕೈಗೊಳಗಳಲಾಗಿದೆ. ಹರಿಯಾಣ ಸಿಎಂ ಮನೋಹರ್ ಲಾಲ್ ಖಟ್ಟರ್ ಈ ಬಗ್ಗೆ ಮಾತನಾಡಿದ್ದು, ಗಲಭೆಕೋರರು ರಾಜ್ಯದ ಶಾಂತಿಯನ್ನು ಹಾಳು ಮಾಡಿದ್ದಾರೆ. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.
ಸಿಎಂ ಆದೇಶದಂತೆ ಗಲಭೆಕೋರರು ವಾಸವಿದ್ದ ಮನೆಗಳನ್ನು ಈಗಾಗಲೇ ತೆರವುಗೊಳಿಸಲಾಗಿದೆ. ಬಾಂಗ್ಲಾದಿಂದ ಬಂದ ಜನರು ಅಕ್ರಮವಾಗಿ ಅಸ್ಸಾಂನಲ್ಲಿ ವಾಸವಿದ್ದರು. ಅಲ್ಲಿಂದ ನುಹ್ ನಗರಕ್ಕೆ ಬಂದು ಗುಡಿಸಲುಗಳನ್ನು ನಿರ್ಮಿಸಿಕೊಂಡಿದ್ದಾರೆ ಎನ್ನಲಾಗಿದೆ. ಒಟ್ಟಾರೆ 250ಕ್ಕೂ ಹೆಚ್ಚು ಗುಡಿಸಲುಗಳನ್ನು ನೆಲಸಮಮಾಡಲಾಗಿದೆ. ಒಟ್ಟಾರೆ ಈವರೆಗೂ ಗಲಭೆಗೆ ಸಂಬಂಧಿಸಿದಂತೆ 176 ಮಂದಿಯನ್ನು ಬಂಧಿಸಲಾಗಿದೆ. 90 ಮಂದಿಯನ್ನು ವಶಕ್ಕೆ ಪಡೆದಿದ್ದು, 41 ಕೇಸ್‌ಗಳು ದಾಖಲಾಗಿವೆ.