ಈ ವರ್ಷ ಕರ್ನಾಟಕದಲ್ಲಿ 2,544 ಪೋಕ್ಸೋ ಪ್ರಕರಣ ದಾಖಲು!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ಅಪ್ರಾಪ್ತ ವಯಸ್ಕರ ಮೇಲಿನ ಲೈಂಗಿಕ ಅಪರಾಧಗಳನ್ನು ಎದುರಿಸುವಲ್ಲಿ ರಾಜ್ಯವು ಇನ್ನು ಹಲವು ಕಠಿಣ ಕ್ರಮ ತೆಗೆದುಕೊಳ್ಳಬೇಕಾಗಿದೆ. ಅಧಿಕೃತ ಮಾಹಿತಿಯ ಪ್ರಕಾರ, ಏಪ್ರಿಲ್, ಮೇ ಮತ್ತು ಜೂನ್ ಎಂಬ ಕೇವಲ ಮೂರು ತಿಂಗಳಲ್ಲಿ ಕರ್ನಾಟಕದಾದ್ಯಂತ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯ್ದೆಯಡಿ 1,104 ಪ್ರಕರಣಗಳು ದಾಖಲಾಗಿವೆ.

ಅಧಿವೇಶನದಲ್ಲಿ ಗೃಹ ಸಚಿವ ಡಾ. ಜಿ. ಪರಮೇಶ್ವರ ಅವರು ಈ ಮಾಹಿತಿ ನೀಡಿದ್ದಾರೆ. ಈ ವರ್ಷದ ಜನವರಿ ಮತ್ತು ಜುಲೈ ನಡುವೆ, ಒಟ್ಟು 2,544 ಪ್ರಕರಣಗಳು ದಾಖಲಾಗಿದ್ದು, 18 ವರ್ಷದೊಳಗಿನ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯಗಳ ಬಗ್ಗೆ ಕಳವಳ ವ್ಯಕ್ತ ಪಡಿಸಿದ್ದಾರೆ.

ಗೃಹ ಸಚಿವರು ನೀಡಿದ ವಿವರಗಳ ಪ್ರಕಾರ, ಈ ವರ್ಷದ ಜನವರಿ ಮತ್ತು ಜುಲೈ ನಡುವೆ ಬೆಂಗಳೂರು ನಗರದಲ್ಲಿ ಅತಿ ಹೆಚ್ಚು ಪೋಕ್ಸೊ ಪ್ರಕರಣಗಳು ವರದಿಯಾಗಿವೆ, ಬೆಂಗಳೂರು- 319 ಪ್ರಕರಣಗಳು, ಶಿವಮೊಗ್ಗ (131), ತುಮಕೂರು (114), ಚಿಕ್ಕಬಳ್ಳಾಪುರ (113), ಬೆಳಗಾವಿ (100), ಚಿತ್ರದುರ್ಗ (100) ಮತ್ತು ಮೈಸೂರು (99). ಉಡುಪಿ ಜಿಲ್ಲೆಯಲ್ಲಿ ಇಂತಹ 30 ಪ್ರಕರಣಗಳು ದಾಖಲಾಗಿವೆ.

ಕರ್ನಾಟಕವು 2023 ರಲ್ಲಿ 3,902 ಮತ್ತು 2024 ರಲ್ಲಿ 4,064 ಪೋಕ್ಸೊ ಪ್ರಕರಣಗಳನ್ನು ದಾಖಲಿಸಿದೆ ಎಂದು ದತ್ತಾಂಶಗಳು ತೋರಿಸುತ್ತವೆ. ಈ ವರ್ಷದ ಜುಲೈ ವೇಳೆಗೆ, 2,544 ಪ್ರಕರಣಗಳು ದಾಖಲಾಗಿದ್ದು, ಅವುಗಳಲ್ಲಿ 1,927 ಪ್ರಕರಣಗಳಲ್ಲಿ ತೀರ್ಪು ನೀಡಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!