ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಕಾನೂನಿನಡಿ 32 ವಾರಗಳ ಗರ್ಭಪಾತಕ್ಕೆ ಅವಕಾಶವಿದ್ದರೂ, ವಿವಾಹಿತ ಮಹಿಳೆಯೊಬ್ಬರು 26 ವಾರಗಳ ಗರ್ಭಪಾತಕ್ಕೆ ಅವಕಾಶ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಸೋಮವಾರ ವಜಾ ಮಾಡಿದೆ. ಮಹಿಳೆಗೆ ತಜ್ಞ ವೈದ್ಯರ ನಿಗಾದಲ್ಲಿ ಸುರಕ್ಷಿತ ಗರ್ಭಧಾರಣೆ ಮತ್ತು ಹೆರಿಗೆ ಮಾಡಿಸಲು ನವದೆಹಲಿಯ ಏಮ್ಸ್ ಆಸ್ಪತ್ರೆಗೆ ಸೂಚಿಸಿದೆ.
ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ನೇತೃತ್ವದ ನ್ಯಾಯಮೂರ್ತಿಗಳಾದ ಜೆ.ಬಿ.ಪರ್ದಿವಾಲಾ ಮತ್ತು ಮನೋಜ್ ಮಿಶ್ರಾ ಅವರನ್ನೊಳಗೊಂಡ ಪೀಠವು ಈ ಆದೇಶ ನೀಡಿದೆ.
ವೈದ್ಯಕೀಯವಾಗಿ ಗರ್ಭದಲ್ಲಿರುವ ಮಗುವನ್ನು ಗರ್ಭಪಾತ ಮಾಡಲು ಅನುಮತಿ ನೀಡಲಾಗುವುದಿಲ್ಲ. ಮಗು ಪೂರ್ಣವಾಗಿ ಬೆಳವಣಿಗೆ ಹೊಂದದೆಯೇ ಹೆರಿಗೆ ಮಾಡುವ ಆಯ್ಕೆಯನ್ನೂ ನಿರಾಕರಿಸಿತು. ತಾಯಿ ಬಯಸಿದಲ್ಲಿ ಶಿಶು ಹುಟ್ಟಿದ ನಂತರ ಅದನ್ನು ಸರ್ಕಾರದ ಸುಪರ್ದಿಗೆ ವಹಿಸಬಹುದು ಎಂದು ಪೀಠ ಹೇಳಿದೆ.
Supreme Court rejects plea of a woman seeking termination of her 26-weeks pregnancy https://t.co/TsLGo07KHt
— ANI (@ANI) October 16, 2023