ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಜೆಟ್‌ನಲ್ಲಿ ಕರ್ನಾಟಕಕ್ಕೆ ಹೆಚ್ಚಿನ ಅನುದಾನ ಕೊಟ್ಟಿಲ್ಲ ಎಂದು ರಾಜ್ಯ ಕಾಂಗ್ರೆಸ್ ನಾಯಕರು ಆರೋಪಿಸುತ್ತಿದ್ದು, ಜೊತೆಗೆ ದಕ್ಷಿಣ ಭಾರತದ ಹಲವು ರಾಜ್ಯಗಳು ಟೀಕಿಸುತ್ತಿದ್ದಾರೆ.
ಇದರ ಬೆನ್ನಲ್ಲೇ ಸಂಸತ್‌ನಲ್ಲಿ ನಿರ್ಮಲಾ ಸೀತಾರಾಮನ್ ಇಂದು ಪ್ರತಿಪಕ್ಷಗಳಿಗೆ ತಿರುಗೇಟು ನೀಡಿದ್ದು,’ಕಾಂಗ್ರೆಸ್ ನೇತೃತ್ವದ ಯುಪಿಎ ಅವಧಿಯ ಬಜೆಟ್‌ನಲ್ಲೂ 26 ರಾಜ್ಯಗಳ ಹೆಸರು ಇರಲಿಲ್ಲ. ಹಾಗಂತ, ಆ ರಾಜ್ಯಗಳಿಗೆ ಅನುದಾನ ನೀಡಿಲ್ಲ ಎಂದು ಅರ್ಥವೇ’ ಎಂಬುದಾಗಿ ಪ್ರಶ್ನಿಸಿದ್ದಾರೆ.
ಬಜೆಟ್ ಭಾಷಣದಲ್ಲಿ ಕೆಲ ರಾಜ್ಯಗಳ ಹೆಸರು ಇಲ್ಲದ ಕಾರಣ, ಕೇಂದ್ರ ಸರ್ಕಾರವು ಆ ರಾಜ್ಯಗಳಿಗೆ ಅನುದಾನವನ್ನೇ ಕೊಟ್ಟಿಲ್ಲ ಎಂಬ ರೀತಿ ಪ್ರತಿಪಕ್ಷಗಳು ಬಿಂಬಿಸುತ್ತಿಲ್ಲ. ಆದರೆ, ನಾನು 2004-05ರಿಂದಲೂ ಮಂಡಿಸಿದ ಬಜೆಟ್ ಪ್ರತಿಗಳನ್ನು ಗಮನಿಸಿದ್ದೇನೆ. 2004-05ರ ಬಜೆಟ್‌ನಲ್ಲಿ ಅಂದರೆ ಯುಪಿಎ ಅವಧಿಯಲ್ಲಿ ಪ್ರಸ್ತುತಪಡಿಸಿದ ಬಜೆಟ್ ಭಾಷಣದಲ್ಲಿ 17 ರಾಜ್ಯಗಳ ಹೆಸರು ಇರಲಿಲ್ಲ. 2006-07ರಲ್ಲಿ 16, 2009ರಲ್ಲಿ 26 ರಾಜ್ಯಗಳ ಹೆಸರುಗಳೇ ಇರಲಿಲ್ಲ. ಹಾಗಂತ, ಈ ರಾಜ್ಯಗಳಿಗೆ ಹಣವೇ ನೀಡಲಿಲ್ಲವೇ’ ಎಂಬುದಾಗಿ ಬಜೆಟ್ ಕುರಿತ ಪ್ರತಿಪಕ್ಷಗಳನ್ನು ಪ್ರಶ್ನಿಸಿದ್ದಾರೆ.
ಸಂಸತ್‌ನ ಎಲ್ಲ ಸದಸ್ಯರಿಗೂ ನಾನು ಒಂದು ಮನವಿ ಮಾಡುತ್ತೇನೆ. ಬಜೆಟ್ ಭಾಷಣದಲ್ಲಿ ಯಾವುದಾದರೂ ರಾಜ್ಯಗಳ ಹೆಸರು ಇಲ್ಲ ಎಂದರೆ, ಆ ರಾಜ್ಯಗಳಿಗೆ ಹಣ ನೀಡುವುದಿಲ್ಲ ಎಂದು ಅರ್ಥವಲ್ಲ. ಸುಳ್ಳು ಹಾಗೂ ಜನರ ದಾರಿ ತಪ್ಪಿಸುವ ರೀತಿ ಅಭಿಯಾನ ಆರಂಭಿಸಲಾಗುತ್ತಿದೆ. ಒಂದು ರಾಜ್ಯದ ಹೆಸರನ್ನು ಬಜೆಟ್ ಭಾಷಣದಲ್ಲಿ ಪ್ರಸ್ತಾಪಿಸಿಲ್ಲ ಎಂದ ಮಾತ್ರಕ್ಕೆ, ಆ ರಾಜ್ಯಕ್ಕೆ ಅನುದಾನವನ್ನೇ ನೀಡಿಲ್ಲ ಎಂಬ ರೀತಿ ಹೇಳುತ್ತಿರುವುದು ನೋವು ತಂದಿದೆ ಎಂಬುದಾಗಿ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.